ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೊರೊನಾ ಸೋಂಕಿತರ ನೆರವಿಗೆ ನೆರವಿನ ಅಭಿಯಾನಕ್ಕೆ ಹಣದ ಹರಿವು ಹರಿದು ಬಂದಿದ್ದು, ಇದೀಗ ತಮ್ಮ ಗುರಿಯನ್ನು 11 ಕೋಟಿಗೆ ಏರಿಸಿಕೊಂಡಿದ್ದಾರೆ.
ಕೋವಿಡ್ 2ನೇ ಅಲೆಗೆ ದೇಶ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ 7 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ವಿರಾಟ್-ಅನುಷ್ಕಾ ದಂಪತಿ ಹೊಂದಿತ್ತು. ಇದರಲ್ಲಿ 2 ಕೋಟಿ ರೂ. ದೇಣಿಗೆಯನ್ನು ಸ್ವತಃ ದಂಪತಿ ನೀಡಿತ್ತು.
ಆದರೆ ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಷನ್ ವಿರುಷ್ಕಾ ದಂಪತಿಯ ಮನವಿಗೆ ಸ್ಪಂದಿಸಿ 5 ಕೋಟಿ ರೂ. ದೇಣಿಗೆ ನೀಡಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವಿಟ್ ಮಾಡಿರುವ ವಿರಾಟ್ ಕೊಹ್ಲಿ, ಎಂಪಿಎಲ್ ನಮ್ಮ ಮನವಿಗೆ ಸ್ಪಂದಿಸಿ ನಿರೀಕ್ಷೆಗೂ ಮೀರಿ ನೆರವಿನ ಹಸ್ತ ಚಾಚಿದ್ದಕ್ಕೆ ಧನ್ಯವಾದಗಳು. ಇದೀಗ ನಮ್ಮ ಗುರಿಯನ್ನು 11 ಕೋಟಿ ರೂ.ಗೆ ಏರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.