ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯುಕ ವಿರಾಟ್ ಕೊಹ್ಲಿ ನಾಯಕನಾಗಿ 50ನೇ ಅರ್ಧಶತಕ ಸಿಡಿಸಿದ್ದೂ ಅಲ್ಲದೇ ಐಪಿಎಲ್ ನಲ್ಲಿ 6000 ರನ್ ಪೂರೈಸಿದ ಮೊದಲಿಗ ಎಂಬ ದಾಖಲೆ ಬರೆದರು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 178 ರನ್ ಬೆಂಬತ್ತಿದ ಆರ್ ಸಿಬಿ ಪರ ಕೊಹ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಪ್ರಸಕ್ತ ಸಾಲಿನಲ್ಲಿ ಮೊದಲ ಅರ್ಧಶತಕ ಸಿಡಿಸಿದ ಕೊಹ್ಲಿ ಐಪಿಎಲ್ ನಲ್ಲಿ 50 ಅರ್ಧಶತಕ ಸಿಡಿಸಿದ ಮೊದಲ ನಾಯಕ ಎನಿಸಿಕೊಂಡರು. ಗೌತಮ್ ಗಂಭೀರ್ ನಾಯಕನಾಗಿ 36 ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಆರ್ ಸಿಬಿಗೆ ಇದು ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಅಲ್ಲದೇ ದೇವದತ್ ಪಡಿಕಲ್ ಜೊತೆ ಶತಕದ ಜೊತೆಯಾಟದ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು.