ಬೆಳಗಾವಿಯಲ್ಲಿ (Belagavi) ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ್ (Arun shahapura) ವಿರುದ್ಧ ಕಾರ್ಯಕರ್ತರ ಅಸಮಾಧಾನ ವಿಚಾರಕ್ಕೆ ಮಾಧ್ಯಮಗಳ ಮೇಲೆ ಲಕ್ಷ್ಮಣ್ ಸವದಿ (Lakshman savadi) ಗೂಬೆ ಕೂರಿಸಿದ್ದಾರೆ.
ಅದು ಬಹುತೇಕ ನಿಮ್ಮಂತ ಸ್ನೇಹಿತರು ಹುಟ್ಟು ಹಾಕಿದ ವಿಚಾರ ಅಂತಾ ನಾ ತಿಳಿದುಕೊಂಡಿದ್ದೇನೆ. ಇದೇ ವೇಳೆ ಪ್ರಭಾಕರ್ ಕೋರೆ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವಿಚಾರಕ್ಕೆ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾಕರ್ ಕೋರೆ (Prabhakar kore) ನಮ್ಮ ನಾಯಕರು ಅದನ್ನೆಲ್ಲಾ ನೀವೆ ಹುಟ್ಟುಹಾಕಿದ್ದು. ಇದನ್ನ ಸೃಷ್ಟಿ ಮಾಡಿ ಕಾಂಗ್ರೆಸ್ (Congress) ನವರಿಗೆ ಸ್ವಲ್ಪ ಪ್ರೊವೋಕ್ ಮಾಡುವ ಕೆಲಸ ಮಾಡ್ತಿದೀರಿ ಎಂದು ತಿಳಿಸಿದರು. ಇದನ್ನೂ ಓದಿ : – ಒಂದು ವಾರದ ವರೆಗೂ ನಾನು ಯಾರನ್ನು ಭೇಟಿ ಮಾಡುವುದಿಲ್ಲ – ಕುಮಾರಸ್ವಾಮಿ
ಆಣೆ ಪ್ರಮಾಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್ ಆಹ್ವಾನ ವಿಚಾರ
ಸುನಿಲ್ ಸಂಕ್ (Sunil sank) ನಮ್ಮ ಅಥಣಿಯವರು, ಅವರು ನಾವೂ ಕೂಡಿ ಮಾತನಾಡ್ತೇವೆ. ಅದರ ಬಗ್ಗೆ ನೀವು ಯಾಕೆ ಮಧ್ಯಸ್ಥಿಕೆ ವಹಿಸಿಕೊಳ್ತೀರಿ. ಮಧ್ಯಸ್ಥಿಕೆ ವಹಿಸೋದು ಅವಶ್ಯಕತೆ ಇಲ್ಲ ನಾವು ಒಂದೇ ತಾಲೂಕಿನವರು.
ಇದೇ ವೇಳೆ ಸವದಿ, ಉಮೇಶ್ ಕತ್ತಿ (Umesh katti) , ಜಾರಕಿಹೊಳಿ (Jaraki holli) ಸಾಹುಕಾರ್ ಮಧ್ಯೆ ಸರಿ ಇಲ್ಲಾ ಅಂತಾ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸವದಿ ಬಹುಶಃ ಯಾರೋ ನಿಮಗೆ ದುಡ್ಡು ಕೊಟ್ಟು ಹೇಳಿಸುತ್ತಿದ್ದಾರೋ ಕಂಡು ಹಿಡಿಯಬೇಕಿದೆ. ಯಾವುದೇ ಬಣನೂ ಇಲ್ಲ ಬಾಣನೂ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : – ಅವನೇನು ಕತ್ತೆ ಕಾಯುತ್ತಿದ್ನಾ..? – ಹೆಚ್.ಡಿ.ಕೆ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶಾಸಕ ಶ್ರೀನಿವಾಸ್