ಬೆಂಗಳೂರು: ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣ ತಂಪೆರೆದಿದ್ದಾನೆ. ಮಳೆ ಬೆಂಗಳೂರಿನ ಮಂದಿಯ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುವುದರ ಜತೆ ಜತೆಗೆ ಆತಂಕವನ್ನೂ ಮೂಡುವಂತೆ ಮಾಡಿದೆ.
ಬಿಸಿಲಿನಿಂದ ಬೇಯುತ್ತಿದ್ದ ನಗರಕ್ಕೆ ಮಳೆರಾಯ ತಂಪೆರೆದಿದ್ದಾನೆ. ನಗರದ ಕೆ.ಆರ್. ಮಾರ್ಕೆಟ್, ಚಾಮರಾಜ ಪೇಟೆ, ಕೆ ಆರ್ ಪುರಂ, ಯಶವಂತಪುರ, ಮಲೇಶ್ವರಂ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಈ ಮಳೆಯಿಂದ ರಸ್ತೆ ತುಂಬೆಲ್ಲಾ ನೀರು ನಿಂತು ಆರ್ ಆರ್ ನಗರದಲ್ಲಿ ಬೈಕ್ ಸವಾರ ಜಾರಿಬಿದ್ದು ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ. ಯುಗಾದಿ ಹಬ್ಬದ ಹರುಷದಲ್ಲಿದ್ದ ಮಂದಿಗೆ ವರುಣರಾಯ ಆಗಮಿಸುವ ಮೂಲಕ ಕೃಪೆ ತೋರಿದ್ದಾನೆ.