ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಚಾಮರಾಜಪೇಟೆ ಪೇಟೆ ಮೈದಾನ ವಿಚಾರ ಮಾತಾಡಲು ಬಂದಿಲ್ಲ.
ಚಾಮರಾಜಪೇಟೆ ಕ್ಷೇತ್ರದ ಶಾಸಕನಾಗಿ ಬಿಬಿಎಂಪಿ ಕಮಿಷನರ್ ಬಳಿ ಮಾತಾಡಲು ಬಂದಿದ್ದೆ. ಕೊರೊನಾ ಸಂದರ್ಭದಲ್ಲಿ 90 ಕೋಟಿ ಹಣ ಫ್ರೀಜ್ ಆಗಿದೆ. ಅದರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲು ಬಂದಿದ್ದೆ. ಮೈದಾನ ವಿಚಾರದ ಬಗ್ಗೆ ವಕ್ಫ್ ಬೋರ್ಡ್ ನವರು ಮಾತಾಡ್ತಾರೆ. ಇದನ್ನೂ ಓದಿ : – ರೈತರನ್ನು ಬಲಿಪಡೆದಾಯಿತು.. ಈಗ ಸೈನಿಕರ ಸರದಿಯೇ? ಅಗ್ನಿಪಥ್ ಯೋಜನೆ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್
ಮೈದಾನದ ಸಂಬಂಧ ಸೋಮವಾರ 10 ಗಂಟೆಗೆ ಸುದ್ದಿಗೋಷ್ಟಿ ನಡೆಸಿ ಡೀಟೈಲ್ ಆಗಿ ಮಾತಾಡ್ತೇನೆ. ಈಗ ಈದ್ಗಾ ಮೈದಾನದ ಬಗ್ಗೆ ಏನು ಮಾತಾಡೋಲ್ಲ ಎಂದು ಜಮೀರ್ ಹೇಳಿದ್ರು.
ಇದನ್ನೂ ಓದಿ : – ರಾಹುಲ್ ಗಾಂಧಿಗೆ 3 ದಿನ ED ಯಿಂದ ರಿಲೀಫ್