ಬಿಜೆಪಿಗೆ ( bjp ) ನನ್ನ ಕರೆದಿದ್ರು ಎಂಬ ಡಿ ಕೆ ಶಿವಕುಮಾರ್ (dk.shivkumar) ಹೇಳಿಕೆ ವಿಚಾರಕ್ಕೆ ಸಚಿವ ಮುನಿರತ್ನ (Muniratna) ಪ್ರತಿಕ್ರಿಯೆ ನೀಡಿದ್ದಾರೆ . ಡಿ ಕೆ ಶಿವಕುಮಾರ್ ರವರನ್ನ ಯಾರು ಕರೆದಿದ್ರು .
ಹೇಗೆ ಕರೆದಿದ್ದಾರೆ, ದೂರವಾಣಿ ಮೂಲಕ ಕರೆದಿದ್ದಾರಾ. ಯಾವ ಸ್ಥಳದಲ್ಲಿ ಕರೆದಿದ್ದಾರೆ ಎಂಬ ಬಗ್ಗೆ ಮೊದಲು ಮಾಹಿತಿ ನೀಡಲಿ ಎಂದು ಮುನಿರತ್ನ ಹೇಳಿದ್ದಾರೆ. ಊಹಾಪೋಹಗಳಿಗೆ ತಲೆಕೊಡಬೇಡಿ ಯಾವ ವ್ಯಕ್ತಿ, ಯಾವ ಸ್ಥಳದಲ್ಲಿ ಎಂದು ಗಮನಕ್ಕೆ ತಂದ್ರೆ ಅದನ್ನ ಪಕ್ಷದವಲಯದಲ್ಲಿ ಚರ್ಚೆ ಮಾಡುತ್ತೇವೆ . ಪಕ್ಷಕ್ಕೆ ಬಹಳಷ್ಟು ಶಕ್ತಿ ಇದೆ . ನಮ್ಮ ಪಕ್ಷಕ್ಕೆ ಯಾವುದೇ ಕೊರತೆ ಇಲ್ಲ . ಯಾವ ವ್ಯಕ್ತಿ ಕರೆದಿದ್ದಾರೆ ಎಂದು ಹೇಳಲಿ. ಡಿಕೆಶಿ ಸಿದ್ದರಾಮಯ್ಯರವರನ್ನ (siddaramaiah) ಕಾಂಗ್ರೆಸ್ ಬಿಡುವಂತೆ ಮಾನಸಿಕವಾಗಿ ಮಾಡುತ್ತಿದ್ದಾರೆ ಎಂದು ಮುನಿರತ್ನ ಸ್ಫೋಟಕ ಹೇಳಿಕೆ ನೀಡಿದ್ದಾರೆ . ಇದನ್ನೂ ಓದಿ : – ಸಚಿವಾಲಯ ನೌಕರರ ಸಂಘ ಕರೆ ನೀಡಿದ್ದ ಬಂದ್ ಬಹುತೇಕ ಯಶಸ್ವಿ – ಶೇ 90ರಷ್ಟು ಸಿಬ್ಬಂದಿ ಗೈರು