ಹೈದರಾಬಾದ್: ರಜೆಗಾಗಿ ಹೈದರಾಬಾದ್ಗೆ ಬಂದಿದ್ದ ಆ ಕುಟುಂಬ ಮರಳಿ ರಾಜಸ್ಥಾನಕ್ಕೆ ಹೊರಟಿತ್ತು. ಆದರೆ ಅಷ್ಟರಲ್ಲಾಗಿದ್ದೇಬೇರೆ. ಹೈದರಾಬಾದ್ನಿಂದ ಜೈಪುರಕ್ಕೆ ತೆರಳಬೇಕಿದ್ದ ರೈಲು ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರಡಬೇಕಿತ್ತು.
ಆಗ ನೀರು ತರಲು ಹೋಗುವುದಾಗಿ ಹೇಳಿ ಹೋದ ಪತ್ನಿ ಬರಲೇ ಇಲ್ಲ. ತನ್ನ ಜೊತೆಗೆ ಮಗನನ್ನೂ ಕರೆದೊಯ್ದ ಪತ್ನಿ ಎಷ್ಟೊತ್ತಾದರೂ ಬರಲೇ ಇಲ್ಲದ್ದನ್ನು ಕಂಡ ಪತಿ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಆಘಾತಕ್ಕೊಳಗಾಗಿದ್ದರು. ಪ್ರಭುದಾಸ್ ಎಂಬುವವರ ಪತ್ನಿ ಬೇರೊಬ್ಬರ ಬೈಕ್ನಲ್ಲಿ ಮಗನನ್ನು ಕೂಡಿಸಿಕೊಂಡು ಹೋಗುತ್ತಿರುವ ದೃಶ್ಯಾವಳಿಗಳನ್ನು ನೋಡಿದ ಪೊಲೀಸರಿಗೆ ತಿಳಿದಿದೆ.
ಪ್ರಭುದಾಸ್ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, 2018ರಲ್ಲಿ ರಮ್ಯಾ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ಒಂದೂವರೆ ವರ್ಷದ ಮಗನಿದ್ದು ರಮ್ಯಾ ಮಗನೊಂದಿಗೆ ಪರಾರಿಯಾಗಿದ್ದಾರೆ.
ನಾವಿಬ್ಬರೂ ಅನ್ಯೋನ್ಯವಾಗಿದ್ದೆವು. ಅವಳು ನನ್ನನ್ನು ತುಂಬಾ ಪ್ರೀತಿಸುತ್ತಿದ್ದಳು. ನಾನು ಅವಳಿಗೆ ಯಾವುದರಲ್ಲೂ ಕಡಿಮೆ ಮಾಡಿರಲಿಲ್ಲ. ಇಬ್ಬರೂ ಮಗನಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ನಾಗರಿಕನನ್ನಾಗಿ ಮಾಡಬೇಕು ಎಂದು ಮಾತನಾಡಿಕೊಂಡಿದ್ದೆವು. ಅಷ್ಟರಲ್ಲಾಗಲೇ ಹೀಗೆ ಬೇರೊಬ್ಬನೊಂದಿಗೆ ಪರಾರಿಯಾಗಿದ್ದಾಳೆ. ನಾನು ನಿಜಕ್ಕೂ ಬಹುದೊಡ್ಡ ಆಘಾತದಲ್ಲಿದ್ದೇನೆ ಎಂದು ಪ್ರಭುದಾಸ್ ಹೇಳಿದ್ದಾರೆ.
ಇನ್ನು, ರಮ್ಯಾ ತಮ್ಮ ಪ್ರಿಯಕರನೊಂದಿಗೆ ಪರಾರಿಯಾಗುವಾಗ 20 ಸಾವಿರ ನಗದು ಸೇರಿದಂತೆ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆನ್ನಲಾಗಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.