ದೇಶದಲ್ಲಿ ವಿಶ್ವದಲ್ಲೇ ಗರಿಷ್ಠ 3.14 ಲಕ್ಷ ಕೊರೊನಾ ಸೋಂಕು ಪತ್ತೆ

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3.14 ಲಕ್ಷ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ವಿಶ್ವದಲ್ಲೇ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯ ಪ್ರಕರಣಗಳಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ದೇಶದಲ್ಲಿ 2014 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,59,30,965ಕ್ಕೆ ಜಿಗಿತ ಕಂಡರೆ, ಸಾವಿನ ಸಂಖ್ಯೆ 1,84,657ಕ್ಕೆ ತಲುಪಿದೆ.

ದೇಶದಲ್ಲಿ 1,78,841 ಮಂದಿ ಸೋಂಕಿನಿಂದ ಗುಣಮುಖಿತರಾಗಿದ್ದು, ಒಟ್ಟಾರೆ ಗುಣಮುಖಿತರ ಸಂಖ್ಯೆ 1,34,54,980ಕ್ಕೆ ತಲುಪಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 22,91,428ಕ್ಕೆ ಜಿಗಿತ ಕಂಡಿದೆ.

ಭಾರತದಲ್ಲಿ ಕಳೆದ 17 ದಿನಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮೂರು ಪಟ್ಟು ಹೆಚ್ಚಾಗುತ್ತಿವೆ. ಏಪ್ರಿಲ್ 15ರಿಂದ ಪ್ರತಿದಿನ 2 ಲಕ್ಷ ಸೋಂಕು ಪತ್ತೆಯಾಗುತ್ತಿದ್ದರೆ, ಇಂದಿನಿಂದ 3 ಲಕ್ಷ ಗಡಿ ದಾಟಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!