ಯುವ ಕುಸ್ತಿಪಟು ಕೊಲೆ ಪ್ರಕರಣದಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಸಾಗರ್ ಕುಸ್ತಿಪಟು ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಹಾಗೂ ಅವರ ಸಹದ್ಯೋಗಿ ಅಜಯ್ ಕುಮಾರ್ ಅವರನ್ನು ಶನಿವಾರ ರಾತ್ರಿ ಮುಂಡ್ಕ ಪ್ರದೇಶದಲ್ಲಿ ಬಂಧಿಸಲಾಗಿದ್ದು, ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ ರೋಹಿಣಿ ಕೋರ್ಟ್ ಮುಂದೆ ದೆಹಲಿ ಪೊಲೀಸರು 12 ದಿನಗಳ ಪೊಲೀಸ್ ಕಸ್ಟಡಿಗೆ ಬೇಡಿಕೆ ಇಟ್ಟಿದ್ದರು. ಆದರೆ 6 ದಿನಗಳ ಕಸ್ಟಡಿಗೆ ಮಾತ್ರ ನೀಡಲಾಗಿದೆ.