ಯೋಗಿ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆ ಕಾನೂನು ಬಾಹಿರ – ಸುಪ್ರೀಂ ಕೋರ್ಟ್ ಗೆ ಅರ್ಜಿ

ಪ್ರವಾದಿ ಮೊಹಮ್ಮದರ ವಿರುದ್ಧ ಬಿಜೆಪಿ ಮಾಜಿ ವಕ್ತಾರೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಹಾಗೂ ಗಲಭೆ ನಡೆಸಿದವರ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸುವ ಉತ್ತರ ಪ್ರದೇಶ ಸರ್ಕಾರದ ನಿಲುವಿನ ವಿರುದ್ಧ ಜಮಾಯಿತ್ ಉಲಮಾ ಐ ಹಿಂದ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.


ಪ್ರತಿಭಟನೆ ಹಾಗೂ ಗಲಭೆ ವೇಳೆ ಆರೋಪಿಗಳು ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಯುಪಿ ಸರ್ಕಾರ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿತ್ತು. ಇದೀಗ ಇವರ ಬೆನ್ನಿಗೆ ಜಮಾಯಿತ್ ನಿಂತಿದೆ. ಕಳೆದ ಏಪ್ರಿಲ್ನಲ್ಲಿ ದಿಲ್ಲಿಯ ಜಹಾಂಗೀರ್ ಪುರಿಯಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆಯಲ್ಲೂ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಜಮಾಯಿತ್, ತಡೆಯಾಜ್ಞೆ ತರುವಲ್ಲಿ ಸಫಲವಾಗಿತ್ತು. ಇದನ್ನೂ ಓದಿ : – ಪ್ರವಾದಿ ಕುರಿತ ಹೇಳಿಕೆ ವಿವಾದ -ಬಂಗಾಳದಲ್ಲಿ ಇಂಟರ್ನೆಟ್ ಸ್ಥಗಿತ – ಉತ್ತರಪ್ರದೇಶದಲ್ಲಿ 227 ಮಂದಿ ಬಂಧನ


ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ 2 ಅರ್ಜಿ ಸಲ್ಲಿಸಿರುವ ಜಮಾಯಿತ್, ಮುನ್ಸಿಪಲ್ ಅಧಿಕಾರಿಗಳು ಕಾನೂನು ಉಲ್ಲಂಘಿಸಿ ಮನೆಗಳನ್ನು ತೆರವು ಮಾಡುತ್ತಿದ್ದಾರೆ. ಗಲಭೆ ನಡೆಸಿದ ಆರೋಪ ಕೇಳಿ ಬಂದವರ ಮನೆಗಳನ್ನು ಧ್ವಂಸ ಮಾಡುವ 15 ದಿನ ಮುನ್ನ ನೋಟಿಸ್ ನೀಡಬೇಕು. 30 ದಿನಗಳ ಕಾಲಾವಕಾಶ ನೀಡಬೇಕು. ಮನೆ ಮಾಲೀಕರು ತಮ್ಮ ಆಸ್ತಿ ಉಳಿಸಿಕೊಳ್ಳಲು ಕಾನೂನು ಹೋರಾಟ ನಡೆಸಲು ಅವಕಾಶ ನೀಡಬೇಕು. ಆದರೆ, ಈ ಯಾವ ನಿಯಮವನ್ನೂ ಪಾಲನೆ ಮಾಡುತ್ತಿಲ್ಲ ಎಂದು ಜಮಾಯಿತ್ ಆರೋಪಿಸಿದೆ.

ಇದನ್ನೂ ಓದಿ : – ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಗು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ತಾಯಿ ಕೈವಾಡ ಶಂಕೆ..?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!