ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೊರೊನಾ ಲಸಿಕೆ ಪಡೆದಿದ್ದಾರೆ. ಅಭಿಷೇಕ್ ಬಚ್ಚನ್ ಅವರನ್ನು ಹೊರತುಪಡಿಸಿ ಮಿಕ್ಕೆಲ್ಲ ಕುಟುಂಬ ಸದಸ್ಯರು ಕೊರೊನಾ ಲಸಿಕೆ ಪಡೆದಿದ್ದಾರೆ.
ಅಭಿಷೇಕ್ ಬಚ್ಚನ್ ಸಿನಿಮಾ ಶೂಟಿಂಗ್ನಲ್ಲಿ ನಿರತರಾಗಿದ್ದು, ಅವರನ್ನು ಬಿಟ್ಟುಕುಟುಂಬದಎಲ್ಲರೂ ಮೊದಲ ಹಂತದಕೊರೊನಾ ಲಸಿಕೆ ಪಡೆದಿದ್ದೇವೆ ಎಂದುಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರಿಗೆ 2020ರಜುಲೈ 11ರಂದು ಕೊರೋನಾ ಸೋಂಕು ತಗುಲಿತ್ತು.
ಈ ಸಂಬಂಧ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದ ಬಿಗ್ ಬಿ ತಮಗೆ ಕೊರೋನಾ ಪಾಸಿಟಿವ್ ಇರೋದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದುಟ್ವೀಟ್ ಮಾಡಿದ್ದರು. ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಬಿಗ್ ಬಿ ಚಿಕಿತ್ಸೆ ಪಡೆದಿದ್ದರು.
ತಮ್ಮ ಜೊತೆ ಸಂಪರ್ಕಕ್ಕೆ ಬಂದ ಹಿತೈಷಿಗಳು ಮತ್ತು ಸ್ನೇಹಿತರು ಕೂಡಾ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.