ಇಲ್ಲಿ ಮದುವೆ ನಡೆಯುತ್ತೆ. ಮದುವೆ ಬಳಿಕ ಹನಿಮೂನ್ ಕೂಡ ನಡೆಯುತ್ತೆ. ಆದ್ರೆ ಮದುವೆಯ ವರ ಮಾತ್ರ ಇರುವುದಿಲ್ಲ. ಇಂತಹ ಒಂದು ಮದುವೆ ಜೂನ್ 11ರಂದು ನಡೆಯಲಿದೆ. ಗುಜರಾತ್ ನ ವಡೋದರಾ ಇಡೀ ದೇಶದಲ್ಲೇ ಇಂತಹ ಮೊದಲ ಮದುವೆ ನೋಡಲಿದೆ.
ವಡೋದರಾ ಮೂಲದ 24 ವರ್ಷದ ಕ್ಷಮಾ ಬಿಂದು ಜೂನ್ 21ರಂದು ತಮ್ಮನ್ನು ತಾವೇ ಮದುವೆಯಾಗಲಿದ್ದಾರೆ. ಈ ಮೂಲಕ ಇಡೀ ದೇಶದಲ್ಲಿ ಮೊದಲ ಸೋಲೋಗಮಿ ( SOLOGAMY ) ಆಗಲಿದ್ದಾರೆ. ಜೂನ್ 11ರಂದು ನಿಗದಿಯಾಗಿರುವ ವಿವಾಹದಲ್ಲಿ ಮದುವೆಯ ಎಲ್ಲಾ ಶಾಸ್ತ್ರಗಳು ನಡೆಯಲಿವೆ. ನಂತರ ಕ್ಷಮಾ ಬಿಂದು ಹನಿಮೂನ್ ಗೆ ಗೋವಾಗೆ ತೆರಳಲಿದ್ದಾರೆ. ಇದನ್ನೂ ಓದಿ : – ನಟ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ ! – ಭದ್ರತೆ ಹೆಚ್ಚಳಕ್ಕೆ ನಿರ್ಧಾರ
ನಾನು ನನ್ನನ್ನು ಪ್ರೀತಿಸುತ್ತೇನೆ ಆದ್ದರಿಂದ ಈ ಮದುವೆ ನಡೆಯುತ್ತಿದೆ. ಸ್ವಯಂ-ವಿವಾಹವನ್ನು ಕೇವಲ ಗಿಮಿಕ್ ಎಂದು ಕರೆಯುವವರನ್ನು ಉದ್ದೇಶಿಸಿ ನಾನು ನಿಜವಾಗಿ ಮಹಿಳೆಯರ ವಿಷಯವನ್ನು ಬಿಂಬಿಸುತ್ತಿದ್ದೇನೆ ಎಂದರು.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಅವರ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ. ಎಲ್ಲಾ ವಿಧಿವಿಧಾನಗಳನ್ನು ಅನುಸರಿಸುವುದರ ಜೊತೆಗೆ, ವಧು ಸ್ವತಃ ಐದು ಪ್ರತಿಜ್ಞೆಗಳನ್ನು ಸಹ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ : – ನ್ಯಾಷನಲ್ ಹೆರಾಲ್ಡ್ ಪ್ರಕರಣ – ಸೋನಿಯಾ ರಾಹುಲ್ ಗಾಂಧಿಗೆ ED ನೊಟೀಸ್