TYSON – ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಜೊತೆ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

KGF -2 ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದೆ. ವಿಜಯ್ ಕಿರಗಂದೂರು (Vijay Kiragandur) ಒಡೆತನದ ‘ಹೊಂಬಾಳೆ ಫಿಲ್ಮ್ಸ್ (Hombale Films) ಪರ ಭಾಷೆಯಲ್ಲೂ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ.

ಇದೀಗ ‘ಹೊಂಬಾಳೆ ಫಿಲ್ಮ್ಸ್ (Hombale Films)ನಿಂದ ಹೊಸ ಸುದ್ದಿ ಹೊರ ಬಿದ್ದಿದೆ. ಮಲಯಾಳಂ ಸ್ಟಾರ್ ನಟ ಪೃಥ್ವಿ ರಾಜ್ ಜತೆ ಹೊಸ ಸಿನಿಮಾ ಘೋಷಿಸುವ ಮೂಲಕ ಈ ನಿರ್ಮಾಣ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಚಿತ್ರಕ್ಕೆ ‘ಟೈಸನ್’ (Tyson) ಎನ್ನುವ ಶೀರ್ಷಿಕೆ ಇಡಲಾಗಿದೆ. ಇದನ್ನೂ ಓದಿ : – ಹಾಟ್‌ ಫೋಟೋ ಶೂಟ್‌ ನಲ್ಲಿ ಮಿಂಚಿದ ಪಾರುಲ್‌ ಯಾದವ್


ನಾಲ್ಕು ಭಾಷೆಗಳಲ್ಲಿ ಟೈಸನ್ ಸಿನಿಮಾ ಮಾಡುತ್ತಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಪೃಥ್ವಿರಾಜ್ ಈ ಸಿನಿಮಾದಲ್ಲಿ ಅವರೇ ಮುಖ್ಯ ಪಾತ್ರ ಮಾಡಿ, ನಿರ್ದೇಶನವನ್ನೂ ಮಾಡಲಿದ್ದಾರೆ. ಮಲಯಾಳಂನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕರೂ ಆಗಿರುವ ಪೃಥ್ವಿರಾಜ್ ಸುಕುಮಾರನ್ ಕೆಜಿಎಫ್ 2 ಸಿನಿಮಾವನ್ನು ಮಲಯಾಳಂನಲ್ಲಿ ಪ್ರೆಸೆಂಟ್ ಮಾಡಿದ್ದರು. ಈ ಸಿನಿಮಾದ ವಿತರಕರೂ ಕೂಡ ಅವರೇ ಆಗಿದ್ದಾರೆ.‌

ಇದನ್ನೂ ಓದಿ : – ‘ತ್ರಿವಿಕ್ರಮ’ ಹಾಡಿಗೆ ಸೆಲೆಬ್ರಿಟಿಗಳ ಸಾಥ್ – ಟ್ರೆಂಡಿಂಗ್’ನಲ್ಲಿ ‘ಹನಿ ಬನಿ’ ಸಾಂಗ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!