ಬೆಂಗಳೂರು: ಸಿಲಿಕಾನ್ ಸಿಟಿಯನ್ನ ಬ್ರ್ಯಾಂಡ್ ಬೆಂಗಳೂರು ಮಾಡೊಕೆ ಡಿಸಿಎಂ ಡಿಕೆ ಶಿವಕುಮಾರ್ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಸಾಕಷ್ಟು ಮೀಟಿಂಗ್ ಮೇಲೆ ಮೀಟಿಂಗ್ ಹೊಸ ಪ್ಲಾನ್ ಮಾಡ್ತಾ ಇದ್ದಾರೆ. ಆದ್ರೆ ಇನ್ನೊಂದು ಕಡೆಯಲ್ಲಿ ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ರಾಜ ಕಾಲುವೆಗಳು ತುಂಬಿ ಹರಿಯುತ್ತೆ.
ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಬ್ರ್ಯಾಂಡ್ ಬೆಂಗಳೂರದ್ದೆ ಮಾತು. ಡಿಕೆಶಿ ಹಾಗ ಮಾಡ್ತಾರೆ ಹೀಗ ಮಾಡ್ತಾರೆ ಅಂತಾ ಬಾಯಿ ಬಡಕೊತಿದ್ದಾರೆ. ಆದ್ರೆ ಇದೆಲ್ಲದಕ್ಕೂ ಮೊದಲು ರಾಜಕಾಲುವೆಗಳತ್ತ ಮುಖ ಮಾಡಿದ್ದಾರಾ ಅನ್ನೋದು ಈಗ ಕಾಡ್ತಿರುವ ಪ್ರಶ್ನೆ. ಒಂದೇ ಒಂದು ಬಾರಿ ಮಳೆ ಬಂದ್ರು ಸಾಕು ಅರ್ಧದಷ್ಟು ಬೆಂಗಳೂರು ನೀರಿನಲ್ಲಿ ಮುಳುಗಿ ದ್ವಿಪಗಳಂತಾಗುತ್ತೆ. ನೊಂದ ಜನ ಸರ್ಕಾರಕ್ಕೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕ್ತಿದ್ದಾರೆ. ಇದು ದಶಕಗಳ ಕಾಲದಿಂದ ನಡೆದು ಬಂದಿರುವ ನರಕಯಾತನೆ. ಮಳೆ ಬಂದಾಗ ಮಾತ್ರ ವಿಸಿಟ್ ಮಾಡೋ ಅಧಿಕಾರಿಗಳು ನಂತರ ಇಲ್ಲಿನ ಜನರನ್ನೇ ಮರೆತು ಬಿಡುತ್ತಾರೆ.
ಇನ್ನು ಬೆಂಗಳೂರಿನ ರಾಜಕಾಲುವೆಗಳಲ್ಲಿ ಕಸ – ಕಡ್ಡಿ, ಹೂಳು ತುಂಬಿಕೊಂಡಿದ್ದು, ನೆನ್ನೆ ಬಂದ ಜೋರು ಮಳೆಗೆ ರಾಜಕಾಲುವೆ ಉಕ್ಕಿ ಹರಿದು ಅಲ್ಲೋಲ ಕಲ್ಲೋಲ ಸೃಷ್ಟಿಮಾಡಿದೆ .
ಒಟ್ಟಾರೆಯಾಗಿ ಬ್ರ್ಯಾಂಡ್ ಬೆಂಗಳೂರು ಕನಸಲ್ಲಿ ರಾಜಕಾಲುವೆಗಳಿಗೆ ಈಗ ಬಡ ಕುಟುಂಬ ಗಳು ಬಿದಿ ಪಾಲಾಗುತಿದ್ದಾರೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ರಾಜಕಾಲುವೆ ಅಭಿವೃದ್ಧಿ ಮಾಡ್ತಾರಾ ಕಾದು ನೋಡಬೇಕಾಗಿದೆ
ವರದಿ: ವರ್ಷಿತ ತಾಕೇರಿ