State News

ರಾಜ್ಯದಲ್ಲಿ FDA ಪರೀಕ್ಷೆ ಅಕ್ರಮ ಪ್ರಕರಣ

ಯಾದಗಿರಿ: ರಾಜ್ಯದಲ್ಲಿ FDA ಪರೀಕ್ಷೆ ಅಕ್ರಮ ಪ್ರಕರಣ ನಡೆದಿದ್ದು, ಬಗೆದಷ್ಟೂ FDA ಪರೀಕ್ಷಾ ಅಕ್ರಮ ಬಯಲಾಗುತ್ತಿದೆ.

ವಾಟ್ಸಾಪ್ ಮೂಲಕ ಪರೀಕ್ಷಾ ಅಕ್ರಮ ನಡೆದಿದೆ ಎಂದು ಹೇಳಲಾಗಿದೆ. ಹುಬ್ಬಳಿಯಿಂದ ಯಾದಗಿರಿಯ ಮಧ್ಯವರ್ತಿಗೆ ವಾಟ್ಸಾಪ್ ನಿಂದ ಉತ್ತರ ಬಂದಿದೆ ಎಂದು ಹೇಳಲಾಗಿದೆ. ನಂತರ ಕಳುಹಿಸಿದ ವಾಟ್ಸಾಪ್ ಉತ್ತರ ಡಿಲೀಟ್ ಆಗಿದೆ. ಹುಬ್ಬಳ್ಳಿಯಿಂದ ಯಾದಗಿರಿಗೆ ಉತ್ತರ ರವಾನೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆ ವೇಳೆ ಬಂಧಿತ ಆರೋಪಿಗಳ ಮೊಬೈಲ್ ನಲ್ಲಿ ಬೆಳಕಿಗೆ ಬಂದಿದೆ. ಇದೇ 28 ರಂದು ನಡೆದ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ FDA ಪರೀಕೆಯಲ್ಲಿ ಬ್ಲೂಟೂತ್ ಅಕ್ರಮ ಬೆಳಕಿಗೆ ಬಂದಿದೆ. ಯಾದಗಿರಿಯ ಐದು ಪರೀಕ್ಷೆ ಕೇಂದ್ರದಲ್ಲಿ ನಡೆದಿದೆ. ಈಗಾಗಲೇ 16 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.ಆರೋಪಿಗಳಿಬ್ಬರ ಮೊಬೈಲ್ ನಲ್ಲಿ ಬಾಸ್ ಎಂಬ ಹೆಸರಿನಲ್ಲಿ ಸೇವ್ ಆದ ನಂಬರ್ ನಿಂದ ಪರೀಕ್ಷೆ ನಡೆಯುವ ವೇಳೆ ಉತ್ತರಗಳ ರವಾನಿಸಿದ್ದಾರೆ.

ಉತ್ತರಗಳನ್ನು ಕಳುಹಿಸಿ ಡಿಲೀಟ್ ಮಾಡಿದ ಬಾಸ್ ಹೆಸರಿನ ವ್ಯಕ್ತಿ. ಪರೀಕ್ಷಾ ಕೇಂದ್ರದೊಳಗಿನ ಅಭ್ಯರ್ಥಿಗಳಿಗೆ ಹೊರಗಿನಿಂದ ಉತ್ತರ ಹೇಳುತ್ತಿರುವ ಆರೋಪಿಗಳಿಗೆ ಉತ್ತರ ಹಂಚಿಕೆ ಮಾಡಿ ಡಿಲೀಟ್ ಮಾಡಲಾಗಿದೆ. ಪ್ರಶ್ನೆಗಳನ್ನು ಕಳುಹಿಸಿದ್ದು ಹೇಗೆ ಉತ್ತರಗಳು ಅಷ್ಟು ಬೇಗ ಹೇಗೆ ಕಳುಹಿಸಲಾಗಿದೆ. ಹಲವು ಆಯಾಮದಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಹುಬ್ಬಳಿ ವ್ಯಕ್ತಿಯಿಂದ ಯಾದಗಿರಿ ಮಧ್ಯವರ್ತಿಗೆ ಅದು ಹೇಗೆ ಉತ್ತರ ಕಳುಹಿಸಲಾಗಿದೆ..? ಎಂದು ಪ್ರಶ್ನೆ ಮೂಡಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!