ಬೆಂಗಳೂರು: ರಾಜ್ಯ ಲೆಕ್ಕ ಪತ್ರಗಳ ಪರಿಶೀಲನೆ ಸಮಿತಿ ಮೇಘಾಲಯಕ್ಕೆ ಭೇಟಿ ನೀಡಿದ್ದಾರೆ. ಮೇಘಾಲಯದ ಆಡಳಿತ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಲು ರಾಜ್ಯ ಸಮಿತಿ ಮುಂದಾಗಿದೆ.
ವಿಧಾನಸಭೆ,ವಿಧಾನಪರಿಷತ್ತು ಆಡಳಿತದ ಬಗ್ಗೆ ಕುರಿತು ಅಧ್ಯಯನ ನಡೆಸಲಿದ್ದಾರೆ. ಸಮಿತಿಯ ಸದಸ್ಯರಾದ ಮಾಜಿ ಸಚಿವ ಆರ್ ವಿ ದೇಶಪಾಂಡೆ,ಶಾಸಕ ಲಕ್ಷ್ಮಣ ಸವದಿ,ಮಾಜಿ ಸಚಿವ ಬಸವರಾಜ ರಾಯರೆಡ್ಡಿ,ಪರಿಷತ್ ಸದಸ್ಯ ಟಿ ಶರವಣ,ಮಾಜಿ ಸಚಿವ ಆರ್ ಅಶೋಕ್, ಸುನಿಲ್ ಕುಮಾರ್,ಸೇರಿದಂತೆ ಸಮಿತಿಯ ಸದಸ್ಯರು ಪ್ರವಾಸ ಕೈಗೊಂಡಿದ್ದಾರೆ. ಎರಡು ದಿನಗಳ ಕಾಲ ಮೇಘಾಲಯಕ್ಕೆ ಭೇಟಿ ನೀಡಿದ್ದಾರೆ.