ವಿಜಯಪುರ : ವಿಜಯಪುರ ಗೋಳಗುಮ್ಮಟ ಕಚೇರಿಗೆ ಬಾಂಬ್ ಇಟ್ಟಿರುವ ಬೆದರಿಕೆ ಬಂದಿದ್ದು, ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ವಿಜಯಪುರ ಗೋಳಗುಮ್ಮಟ ಎದುರಿನ ಮ್ಯೂಜಿಯಂನಲ್ಲಿ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದರು. ತಪಾಸಣೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
ಮ್ಯೂಜಿಯಂನ ಹಲವು ಜಾಗದಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಹಾಕಿದ್ದರು. ಟೆರರೈಸರ್ಸ್ ಗ್ರುಪ್ ಹೆಸರಲ್ಲಿ ಮೇಲ್ ಬಂದಿದೆ. ನಿನ್ನೆ ಸಾಯಂಕಾಲ ಮೇಲ್ ಬಂದಿತ್ತು. ಕೂಡಲೇ ಪೊಲೀಸರಿಗೆ ಸಂಬಂಧಪಟ್ಟವರು ಮಾಹಿತಿ ನೀಡಿದ್ದರು.
ವಿಷಯ ತಿಳಿದ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಬಾಂಬ್ ಪತ್ತೆ ಆಗದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ಮನದಟ್ಟು ಮಾಡಿಕೊಂಡಿದ್ದಾರೆ. ಆದರೆ ತನಿಖೆ ಮುಂದುವರಿದ್ದಿದ್ದು, ಟೆರರೈಸರ್ಸ್ ಹೆಸರಲ್ಲಿ ಬಂದಿರುವ ಮೇಲ್ ಬಗ್ಗೆ ಗೋಳಗುಮ್ಮಟ ಪೊಲೀಸರು ಮಾಹಿತಿ ಕೆದಕುತ್ತಿದ್ದಾರೆ.