ಬೆಂಗಳೂರು: ಸಿಎಂ ಕನಸು ಕಾಣುತ್ತಿದ್ದ ಡಿಕೆಶಿವಕುಮಾರ್ ಕನಸು ಕನಸಾಗಿಯೇ ಇರುತ್ತೇನೋ.ಚುನಾವಣೆಯಲ್ಲಿ ಸಮುದಾದ ಕಾರ್ಯಕ್ರಮಗಳಲ್ಲಿ ನನ್ನ ಕೈಯಲ್ಲು ಪೆನ್ನು ಕೊಡಿ ಎಂದು ಬೇಡಿಕೊಂಡಿದ್ದ ಡಿಕೆಶಿ.ಡಿಕೆ ಸಿಎಂ ಆಗಿಯೇ ಆಗ್ತಾರೆ ಎಂದು ಉತ್ಸಾಹದಲ್ಲಿದ್ದ ಸಮುದಾಯಕ್ಕೆ ಸಿದ್ದರಾಮಯ್ಯ ಶಾಕ್ ನೀಡಿದ್ದಾರೆ.
ಡಿಸಿಎಂ ಡಿಕೆಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿದ್ರು..ಈ ಭಾರಿ ಸಿಎಂ ಗಾಧಿ ಏರಲೇಬೇಕು ಎಂದು ಹಠ ತೊಟ್ಟು ಬಿಜೆಪಿಯಲ್ಲಿದ್ದ ಹಲವು ನಾಯಕರನ್ನ ಕಾಂಗ್ರೆಸ್ ಗೆ ಸೆಳೆದ್ರು..ಪ್ರತಿ ವಿಧಾನಸಭೆಯಲ್ಲಿಯು ಆಪರೇಷನ್ ಹಸ್ತ ಮಾಡು ತಂತ್ರಗಾರಿಕೆ ಹೂಡಿದ್ರು..ಒಕ್ಕಲಿಗ ಸಮುದಾಯವನ್ನ ಪರಿ ಪರಿಯಾಗಿ ಬೇಡಿ ಅಧಿಕಾರ ಕೊಡಿ ಎಂದು ಕೇಳಿಕೊಂಡ್ರು…
ಸಿಎಂ ಆಗ್ತಿನಿ ಎಂಬ ಉತ್ಸಾಹದಲ್ಲಿ ಡಿಕೆಶಿವಕುಮಾರ್ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ರು..ಪಕ್ಷ ಏನು ಅಧಿಕಾರಕ್ಕೆ ಬಂತು ಆದರೆ ಸಿಎಂ ಗಾದಿ ಡಿಕೆಶಿವಕುಮಾರ್ ಗೆ ಸಿಗಲೇ ಇಲ್ಲಾ.ಸಿಎಂ ಆಯ್ಕೆ ವೇಳೆ ಸಾಕಷ್ಟು ಕಸರತ್ತು ನಡೆಸಿದ್ರು ಈ ವೇಳೆ ಎರಡು ವರ್ಷ ಸಿದ್ದರಾಮಯ್ಯ ಸಿಎಂ ಆಗ್ತಾರೆ..ಇನ್ನ ಎರಡುವರೇ ವರ್ಷ ನೀವಾಗಿ ಎಂದು ಹೈಕಮಾಂಡ್ ನಾಯಕರು 2.5 ಸೂತ್ರದಡಿ ಲೆಕ್ಕಾಚಾರ ಹಾಕಿ ಡಿಕೆ ಶಿವಕುಮಾರ್ ಅವರನ್ನ ಸಮಾಧಾನ ಪಡಿಸಿದ್ರು ಎಂದು ಹೇಳಲಾಗಿದೆ.ಇನ್ನೂ ಅದಕ್ಕೆ ಪೂರಕವೆಂಬಂತೆ ಡಿಕೆ ಆಪ್ತ ಶಾಸಕರು ಡಿಕೆಶಿವಕುಮಾರ್ ಸಿಎಂ ಆಗ್ತಾರೆ ಎಂದು ಪದೇ ಪದೇ ಹೇಳಿಕೆ ಕೊಡ್ತಾನೆ ಇದ್ರು..ಆದರೆ ಈಗಾ ಅದೇಲ್ಲವು ಉಲ್ಟಾ ಆಗಿದೆ…
ಹೌದು ಸಿಎಂ ಬದಲಾವಣೆ ಆಗ್ತಾರೆ ಎಂಬ ವಿಚಾರಕ್ಕೆ ಸಿದ್ದರಾಮಯ್ಯ ತೆರೆ ಎಳಿದಿದ್ದಾರೆ..ಹಂಪಿಯಲ್ಲಿ ಮಾತನಾಡಿದ ಸಿಎಂ ಐದು ವರ್ಷನು ನಮ್ಮದೆ ಸರ್ಕಾರ ಇರುತ್ತೆ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿ ಕೈ ಪಾಳಯದಲ್ಲಿಯೇ ಹೊಸ ಸಂಚಲನ ಮೂಡಿಸಿದ್ದಾರೆ..ಈ ಹೇಳಿಕೆಯಿಂದ ಡಿಕೆ ಬಣದ ಶಾಸಕರಿಗೆ ನುಂಗಾಲಾರದ ತಿತ್ತಾಗಿದೆ..ಒಳ ಒಳ ಒಳಗೆ ಕಿಡಿ ಹತ್ತಿದ್ರು..ಬಹಿರಂಗವಾಗಿ ಯಾವ ನಾಯಕರು ಆಕ್ರೋಶವನ್ನ ಹೊರ ಹಾಕುತ್ತಿಲ್ಲ..ಈದಕ್ಕೆ ಉದಾಹರಣೆಗೆ ಎಂಬಂತೆ ಡಿಕೆ ಸುರೇಶ್ , ಪರಮೇಶ್ವರ್ ಹೇಗೆ ಸಾಪ್ಟ್ ಹೇಳಿಕೆ ನೀಡದ್ದಾರೆ ನೀವೆ ಕೇಳಿ…
ಒಟ್ಟಾರೆ ಸಿಎಂ ಸಿದ್ದರಾಮಯ್ಯ ಹೇಳಿಕೆ ಅಂತು ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡುತ್ತಿದೆ..ಅದರಲ್ಲೂ ಒಕ್ಕಲಿಗ ಸಮುದಾದ ಕೆಂಗಣ್ಣಿಗೆ ಸಿದ್ದರಾಮಯ್ಯ ಗುರಿ ಆಗಿದ್ದಾರೆ..ಡಿಕೆಶಿವಕುಮಾರ್ ಒಳ ಒಳೊಗೆ ಆತಂಕ ಶುರುವಾಗಿದೆ..
ವರದಿ: ಬಸವರಾಜ ಹೂಗಾರ