ಚಿಕ್ಕಮಗಳೂರು : ಹೊರನಾಡು ಭದ್ರಾ ನದಿ ತೀರದಲ್ಲಿ ವಾಮಾಚಾರ ನಡೆದಿದ್ದು, ನದಿ ದಡದಲ್ಲಿ ಪೂಜೆ-ಪುನಸ್ಕಾರ ಮಾಡಿ ನಾಲ್ಕು ಕುರಿಗಳನ್ನು ಕಿಡಿಗೇಡಿಗಳು ಬಲಿ ಕೊಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಭದ್ರಾ ನದಿಯ ತೀರದಲ್ಲಿ ವಾಮಾಚಾರ ಮಾಡಿಸಲಾಗಿದೆ. ನದಿ ದಡದಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡಿ ರಾತ್ರೋರಾತ್ರಿ ನಾಲ್ಕು ಕುರಿಗಳ ರುಂಡ-ಮುಂಡ ಬೇರ್ಪಡಿಸಿ ಮಾಟ ಮಂತ್ರ ಮಾಡಿಸಿದ್ದಾರೆ. ಕಳಸ ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಬಳಿ ಕಳೆದ ಎರಡು ದಿನದಿಂದ ನಿರಂತರವಾಗಿ ಭದ್ರಾ ನದಿಯ ತೀರದಲ್ಲಿ ವಾಮಾಚಾರ ಮಾಡಲಾಗುತ್ತಿದೆ. ಭದ್ರಾ ನದಿಯಲ್ಲಿ ನಾಲ್ಕು ಕುರಿಗಳು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
ದಂಡೆಯಲ್ಲಿ ಅರಿಶಿನ ಕುಂಕುಮ ಬಟ್ಟೆ ಪತ್ತೆಯಾಗಿದೆ. ವಾಮಾಚಾರಕ್ಕಾಗಿ ಪೂಜೆ ನಡಿಸಿ ಕುರಿ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳು ನದಿ ದಂಡೆಯಲ್ಲಿ ಕುರಿ ಕಡಿದು ನದಿಗೆ ಎಸೆದಿದ್ದಾರೆ. ಭದ್ರಾ ನದಿಯ ದಂಡೆಯಲ್ಲಿ ನಡೆಯುತ್ತಿರುವ ವಾಮಾಚಾರದಿಂದ ಸ್ಥಳೀಯರು, ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.