ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ( Congress) ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ್( Basavaraj gurikar ) ಸ್ಪರ್ಧಿಸಿದ್ದಾರೆ . ಬಸವರಾಜ ಗುರಿಕಾರ್ 40 ಬಸವರಾಜ ಹೊರಟ್ಟಿ(Basavaraj horatti ) ಸೋಲಿನ ಭೀತಿ ಹಾಗೂ ಅಧಿಕಾರದ ಆಸೆಯಿಂದ ಬಿಜೆಪಿ (Bjp) ಸೇರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್( Salim ahamed ) ಹೇಳಿದ್ದಾರೆ .
ಹಾವೇರಿಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಅವರ ಕೆಲಸ ಪ್ರಾಮಾಣಿಕತೆ , ಹೋರಾಟ ಎಲ್ಲ ಶಿಕ್ಷಕರಿಗೆ ಗೊತ್ತಿದೆ.ಬಸವರಾಜ ಹೊರಟ್ಟಿ 7 ಬಾರಿ ಆಯ್ಕೆಯಾಗಿದ್ದಾರೆಆದರೆ ಹೊರಟ್ಟಿಯವರು ಪಕ್ಷ ಬದಲಾವಣೆ ಮಾಡಿದ್ದಾರೆ. ಇದಕ್ಕೆ ಕಾರಣ ಸೋಲಿನ ಭೀತಿ ಇರಬಹುದು ಇಲ್ಲದಿದ್ದರೆ ಅಧಿಕಾರದ ಆಸೆಯೂ ಇರಬಹುದು. ಮತ್ತೆ ಚೇರ್ಮನ್ ಆಗಿ ಮುಂದುವರೆಯಬಹುದು ಅಂತ ಬಿಜೆಪಿಗೆ ಹೋಗಿದ್ದಾರೆ.ಜಾತ್ಯಾತೀತ ವಿಚಾರ ಇಟ್ಟುಕೊಂಡು ಚುನಾವಣೆ ಗೆದ್ದು ಅವರು ಈಗ ಕೋಮುವಾದಿ ಪಕ್ಷಕ್ಕೆ ಸೇರಿದ್ದಾರೆ. ಬಸವರಾಜ ಹೊರಟ್ಟಿ ರಾಜಕೀಯದ ಕೊನೆಯ ದಿನಗಳಲ್ಲಿ ಸಿದ್ದಾಂತ ಬಲಿ ಕೊಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಇದನ್ನೂ ಓದಿ : – ಯುನಿಕಾರ್ನ್ ಮೂಲಕ 25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹ – ಮೋದಿ
ಶಿಕ್ಷಕರು ಬಸವರಾಜ ಗುರಿಕಾರ್ ಅವರಿಗೆ ಆಶೀರ್ವಾದ ಮಾಡಬೇಕು.ಇತ್ತೀಚೆಗೆ ಮಾಜಿ ಪ್ರಧಾನಿ ನೆಹರೂ ಹಾಗೂ ಪ್ರಧಾನಿ ಮೋದಿ ಸಾಧನೆಗಳ ಕುರಿತು ಭಾರಿ ಚರ್ಚೆ ವಿಚಾರ ನಡೆದಿದೆ. ಅಧಿಕಾರಕ್ಕೆ ಬಂದು 8 ವರ್ಷವಾದರೂ ಒಂದೇ ಒಂದು ಪ್ರೆಸ್ ಕಾನ್ಫರೆನ್ಸ್ ಮಾಡಿಲ್ಲ. ಸುಳ್ಳು ಹೇಳುತ್ತಾ ಅಧಿಕಾರ ನಡೆಸುತ್ತಾ ಬಂದಿದ್ದಾರೆ. ಮೈ ನರೇಂದ್ರ ಮೋದಿ ಹುಂ ಅಂತ ಹೇಳ್ತಾರಲ್ಲಾ ಅದೊಂದೇ ಅವರು ಹೇಳಿದ ಸತ್ಯ. ನೆಹರೂರವರು ಕಟ್ಟಿದ ಸಂಸ್ಥೆ, ಕಟ್ಟಡಗಳು ಎಲ್ಲವನ್ನೂ ಇವರು ಮಾರಿದರು.ಅವರು ಕಟ್ಟಿದ್ದರು.ಇವರು ಮಾರಿದರು. ಇದೇ ನೆಹರೂ ಹಾಗೂ ಮೋದಿಯವರ ನಡುವೆ ಇರುವ ವ್ಯತ್ಯಾಸವೆಂದು ಮೋದಿ ವಿರುದ್ದ ಸಲೀಂ ಅಹ್ಮದ್ ವ್ಯಂಗ್ಯ. ಇದನ್ನೂ ಓದಿ : – ಮಾರಣಾಂತಿಕ ವೈರಸ್ ಜ್ವರದಿಂದ ನಡುಗಿದ ಇರಾಕ್