ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗಿದೆ. ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ ಮತ್ತು ಅನುವಂಶೀಯವಾಗಿಯೂ ಕೂದಲು ಉದುರಬಹುದು.
ಇದಕ್ಕೆ ಕೆಲವು ಮನೆ ಮದ್ದುಗಳನ್ನು ಬಳಸಬಹುದಾಗಿದೆ. ನಿಂಬೆ ರಸ, ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.
ಇದರಿಂದ ತುರಿಕೆ, ತಲೆಹೊಟ್ಟು ಸಮಸ್ಯೆಗಳನ್ನು ನಿವಾರಿಸಬಹುದು. ಆಕರ್ಷಕ ಕೂದಲು ಬೇಕೆಂದರೆ ನಿಮ್ಮ ಊಟದಲ್ಲಿ ಹಸಿರು ಸೊಪ್ಪು, ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಇದನ್ನು ಓದಿ :- ಊಟದ ನಂತರ ಯಾವ ಹಣ್ಣನ್ನು ಸೇವಿಸಬೇಕು ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ
ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ.
ಅಲೋವೆರಾ ಎಲೆಗಳಿಂದ ತಲೆ ಚೆನ್ನಾಗಿ ಉಜ್ಜಿದ ನಂತರ 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಸಾಮಾನ್ಯ ತಂಪಾದ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ ಹೀಗೆ ಮಾಡುವುದರಿಂದ ನಿಮ್ಮ ತಲೆಕೂದಲಿನ ಹೊಟ್ಟನ್ನು ನಿವಾರಿಸಬಹುದಾಗಿದೆ.
ಇದನ್ನು ಓದಿ :- ಬೇಸಿಗೆಯಲ್ಲಿ ಯಾವ ರೀತಿಯ ಆಹಾರ ಸೇವಿಸಿದರೆ ಒಳ್ಳೆಯದು ಗೊತ್ತಾ..?