ಈ ಕಾಲದಲ್ಲಿ ಒಂದು ಮಗು ಹೆರುವುದೇ ಕಷ್ಟ. ಅಂತಹದರಲ್ಲಿ 10 ಮಕ್ಕಳಿಗೆ ಜನ್ಮ ನೀಡುವುದು ಸುಲಭವೇನಲ್ಲ. ಆದರೆ, ಮಾತನ್ನು ದಕ್ಷಿಣ ಆಫ್ರಿಕಾದ ಮಹಿಳೆ ಸಾಬೀತು ಮಾಡಿದ್ದಾರೆ.
ಪಿಟ್ರೋರಿಯಾದ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸಿಯಮ್ ತಮಾರ ಸಿಥೋಲ್ ಎಂಬಾಕೆಯೇ 10 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ.ಒಟ್ಟು 10 ಮಕ್ಕಳಲ್ಲಿ 3 ಹೆಣ್ಣು ಮಗುವಾದರೆ, 7 ಗಂಡು ಮಕ್ಕಳಾಗಿದ್ದಾರೆ.
ಸಿಥೋಲ್‌ಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಈಗ ಈಕೆ 12 ಮಕ್ಕಳ ತಾಯಿಯಾಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.