ಸುದೀಪ್ ಅಭಿನಯಿಸಿರುವ ಬಹುನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿದ್ದಾರೆ.
ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಮುಂದೂಡುತ್ತಾ ಬಂದಿದ್ದ ಕೋಟಿಗೊಬ್ಬ-3 ಚಿತ್ರ ಇದೇ ತಿಂಗಳ 14ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಟ್ರೇಲರ್ ಅನ್ನು ಕೊನೆ ಕ್ಷಣದಲ್ಲಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರ ಅದ್ಧೂರಿಯಾಗಿದ್ದು, ಅಭಿಮಾನಿಗಳ ಮನರಂಜಿಸುವುದರಲ್ಲಿ ಎರಡು ಅನುಮಾನವಿಲ್ಲ ಎಂಬಂತೆ ಟ್ರೇಲರ್ ಮೂಡಿಬಂದಿದೆ.