ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 7 ಮಂದಿಗೆ ಡ್ರಗ್ಸ್ ಪ್ರಕರಣದಲ್ಲಿ ಮುಂಬೈನ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮುಂಬೈನಿಂದ ಹೊರಟ ಹಡಗಿನಲ್ಲಿ ನಡೆದ ರೇವ್ ಪಾರ್ಟಿ ವೇಳೆ ಎನ್ ಸಿಪಿ ನಡೆಸಿದ ದಾಳಿಯಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಆರ್ಯನ್ ಸೇರಿದಂತೆ ಇದುವರೆಗೂ 18 ಮಂದಿಯನ್ನು ಬಂಧಿಸಲಾಗಿದ್ದು, ಆರ್ಯನ್ ಜೊತೆ ಸಿಕ್ಕಿಬಿದ್ದಿದ್ದ 7 ಮಂದಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈಗಾಗಲೇ 3 ದಿನ ಎನ್ ಸಿಪಿ ವಶಕ್ಕೆ ನೀಡಿದ್ದ ಕಿಲ್ಲಾ ನ್ಯಾಯಾಲಯ, ಈ ಬಾರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.