ನಂಜನಗೂಡಿನಲ್ಲಿ ದೇವರ ತಾಳಿ ಕದ್ದ ಕಳ್ಳರು – ಪಶ್ಚಾತಾಪದಿಂದ ವಾಪಸ್

ದೇವರ ತಾಳಿಯನ್ನ ಕದ್ದಿದ್ದ ಕಳ್ಳರು ವಾಪಸ್ ಇಟ್ಟು ಜೊತೆಗೆ 101 ರೂಪಾಯಿ ತಪ್ಪು ಕಾಣಿಕೆ ಇಟ್ಟು ಹೋಗಿರುವ ಘಟನೆ ನಂಜನಗೂಡು ತಾಲೂಕಿನ ಉಪ್ಪಿನ ಹಳ್ಳಿ ಗ್ರಾಮದ ದುರ್ಗಾಂಭ ದೇವಸ್ಥಾನದಲ್ಲಿ ನಡೆದಿದೆ.

ಕಳೆದ ತಿಂಗಳ 24 ರಂದು ದೇವಾಲಯದ ಮುಖ್ಯ ಬಾಗಿಲನ್ನ ಹೊಡೆದು ಹುಂಡಿಯನ್ನ ಕಳವು ಮಾಡಿದ್ದರು. ಆದರೆ ಅದೇ ಸಂದರ್ಭದಲ್ಲಿ ದೇವಾಲಯದ ಗರ್ಭಗುಡಿ ಬಾಗಿಲು ಒಡೆಯಲು ವಿಫಲರಾಗಿದ್ದು, ಕಿಟಕಿಯ ಮೂಲಕ ಕಡ್ಡಿಯ ಸಹಾಯದಿಂದ ದೇವರ ಮೇಲಿದ್ದ ಚಿನ್ನದ ತಾಳಿಯನ್ನ ಕದ್ದು ಪರಾರಿ ಆಗಿದ್ದರು. ಇದನ್ನು ಓದಿ :- ಬಿಜೆಪಿ ಸರ್ಕಾರ ವಿರುದ್ದ ಕಿಡಿಕಾರಿದ ಶರತ್ ಬಚ್ಚೇಗೌಡ

ಆದರೆ ಹುಂಡಿ ಕದ್ದ ಕಳ್ಳರು ತಾಳಿಯನ್ನ ವಾಪಸ್ ತಂದು ದೇವಾಲಯದ ಬಳಿ ಇಟ್ಟು 101 ರೂಪಾಯಿ ತಪ್ಪೊಪ್ಪಿಗೆ ಕಾಣಿಕೆಯನ್ನ ಇಟ್ಟು ಹೋಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ :- ರಾಮನಗರ ಕ್ಲೀನ್ ಮಾಡ್ತೇನೆ ಅಂತ ಬಂದ್ರು ಇದೇನಾ ಕ್ಲೀನ್ ಎಂದ ಡಿಕೆಶಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!