ಕಳೆದ ತಿಂಗಳು ಯಶ್ ನಟನೆಯ ಚಿತ್ರವಾದ ಕೆಜಿಎಫ್ 2 ಏಪ್ರಿಲ್ 14 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಧೂಳೆಬ್ಬಿಸಿ ಅಭಿಮಾನಿಗಳ ಮನಸ್ಸನ್ನು ಗೆಲ್ಲುವುದರಲ್ಲಿ ಯಶ್ ಯಶಸ್ವಿಯಾಗಿದ್ದಾರೆ.
ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಕೆ.ಜಿ.ಎಫ್ 3 ಬಗ್ಗೆ ಸುಳಿವು ನೀಡಿದ ಚಿತ್ರತಂಡ . ಈಗ ಅದರ ಕುರಿತು ಸಿಹಿ ಸುದ್ದಿಯನ್ನು ನೀಡಿದೆ. ‘KGF 2’ ಸಿನಿಮಾ ನೋಡಿ ಇನ್ನೇನು ಥಿಯೇಟರ್ನಿಂದ ಹೊರಬರುವವರಿಗೆ ‘ ಕೆಜಿಎಫ್ ‘ 3 ಬರಲಿದೆ ಎಂದು ಚಿತ್ರತಂಡ ಅಭಿಮಾನಿಗಳಿಗೆ ಸಿಹಿ ಸರ್ಪ್ರೈಸ್ ನೀಡಿತ್ತು. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ.”ಪ್ರಭಾಸ್ ಅವರ ಸಲಾರ್ ಸಿನಿಮಾದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಬ್ಯುಸಿಯಿದ್ದಾರೆ. ಇದನ್ನೂ ಓದಿ :- ಕೆಜಿಎಫ್ -2 ನಟಿ ಅರ್ಚನಾ ಜೋಯಿಸ್ ಜೊತೆಗೆ ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು
ಈಗಾಗಲೇ 30-35% ಶೂಟಿಂಗ್ ಮುಗಿದಿದೆ, ಮುಂದಿನ ವಾರ ಮತ್ತೊಂದು ಶೆಡ್ಯೂಲ್ ಶುರುವಾಗುತ್ತದೆ. ಅಕ್ಟೋಬರ್, ನವೆಂಬರ್ನಲ್ಲಿ ಶೂಟಿಂಗ್ ಮುಗಿಸುವ ಆಲೋಚನೆ ಹಾಕಿಕೊಂಡಿದ್ದೇವೆ. ಅಕ್ಟೋಬರ್ ನಂತರದಲ್ಲಿ ಕೆಜಿಎಫ್ 3 ಶೂಟಿಂಗ್ ಆರಂಭಿಸೋಣ ಎಂದು ಆಲೋಚನೆ ಹಾಕಿದ್ದೇವೆ. 2024ರಲ್ಲಿ ಸಿನಿಮಾ ರಿಲೀಸ್ ಮಾಡಬಹುದು ಎಂಬ ಆಶಯ ಕೂಡ ಹೊಂದಿದ್ದೇವೆ” ಎಂದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ವಿಜಯ್ ಕಿರಗಂದೂರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ :- 1000 ಕೋಟಿ ಕಲೆಕ್ಷನ್ ಮಾಡಿದ `ಕೆಜಿಎಫ್ 2