ವಿಶ್ವದ ಶ್ರೀಮಂತ ಗೌತಮ್ ಅದಾನಿ ಪತ್ನಿ ರಾಜ್ಯಸಭೆಗೆ ?

ಪ್ರಮುಖ ರಾಜಕೀಯ, ಬೆಳವಣಿಗೆಯೊಂದರಲ್ಲಿ ವಿಶ್ವದ ನಂ. 5 ಶ್ರೀಮಂತ, ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಕುಟುಂಬಸ್ಥರ ರಾಜ್ಯಸಭೆ ರಂಗ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ. ಸ್ವತಃ ಗೌತಮ್ ಅದಾನಿ ಅಥವಾ ಅವರ ಪತ್ನಿ ಪ್ರೀತಿ ಅದಾನಿ ಆಂಧ್ರ ಪ್ರದೇಶದಿಂದ ಮೇಲ್ಮನೆ ಪ್ರವೇಶಲಿದ್ದಾರೆ ಎಂದು ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

Gautam Adani: ಗೌತಮ್‌ ಅದಾನಿ ಪತ್ನಿ ರಾಜ್ಯಸಭೆಗೆ? ಆಂಧ್ರ ಪ್ರದೇಶದಿಂದ ಎಂಟ್ರಿಗೆ  ನಡೆದಿದೆ ಗೇಮ್‌ ಪ್ಲ್ಯಾನ್‌ - gautam adani wife priti adani may get rajya sabha  nomination from andhra pradesh ...


ಇದೇ ಬರಲಿರುವ ಜೂನ್ 10 ರಂದು ಆಂಧ್ರ ಪ್ರದೇಶದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯಲ್ಲಿ ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ ಹೊಂದಿರುವ ಸಂಖ್ಯಾ ಬಲದ ಹಿನ್ನೆಲೆಯಲ್ಲಿ ಎಲ್ಲಾ ನಾಲ್ಕು ಸ್ಥಾನಗಳನ್ನೂ ಗೆಲ್ಲುವ ಅವಕಾಶ ಹೊಂದಿದ್ದು, ಅದಾನಿ ಪತ್ನಿ ಕೂಡ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ಅದಾನಿ ಭಾರತದ ನಂ.2 ಸಿರಿವಂತ ಉದ್ಯಮಿ; ನಿತ್ಯದ ಗಳಿಕೆ 163 ಕೋಟಿ ರೂಪಾಯಿ | udayavani

ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್ನ ಹಿರಿಯ ಗ್ರೂಪ್ ಅಧ್ಯಕ್ಷ ಪರಿಮಲ್ ನಠ್ವಾಣಿಯನ್ನು ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ರಾಜ್ಯಸಭೆಗೆ ಕಳುಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಅವರು ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿತ್ತು.  ಇದನ್ನೂಓದಿ : – ರಮ್ಯಾ ಪಕ್ಷ ಬಿಟ್ಟು ಹೋಗಿಲ್ಲ, ಯಾವಾಗ ಬೇಕಾದ್ರೂ ಸಂಘಟನೆಗೆ ಬರಬಹುದು – ಎಂಎಲ್ಸಿ ರಾಜೇಂದ್ರ

ಶ್ರೀಮಂತಿಕೆಯಲ್ಲಿ ಬಫೆಟ್‌ರನ್ನು ಹಿಂದಿಕ್ಕಿದ ಅದಾನಿ : ಜಗತ್ತಿನ 5ನೇ ಸಿರಿವಂತ ವ್ಯಕ್ತಿ  | udayavani

ಇದೀಗ ಪುನಃ ಅಮಿತ್ ಶಾ ಸೂಚನೆ ಮೇರೆಗೆ ಅದಾನಿ ಕುಟುಂಬಸ್ಥರ ಪಾಲಿಗೆ ರಾಜ್ಯಸಭೆಯ ಬಾಗಿಲು ತೆರೆದುಕೊಡಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಜಗನ್ಮೋಹನ್ ರೆಡ್ಡಿಯನ್ನು ಅಮಿತ್ ಶಾ ಭೇಟಿಯಾಗಿದ್ದರು. ಈ ವೇಳೆ ವಿಷಯ ಪ್ರಸ್ತಾಪಿಸಿದ್ದಕ್ಕೆ, ಜಗನ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : –  ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ರಾಜೀನಾಮೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!