ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾ (SHANKARA MISHRA) ಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜ. 7 ರಂದು ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟಿದ್ದ ಮಿಶ್ರಾಗೆ 1 ಲಕ್ಷ ರೂ. ಬಾಂಡ್ ಮತ್ತು ಅಷ್ಟೇ ಮೊತ್ತದ ಒಂದು ಶ್ಯೂರಿಟಿ ಮೇಲೆ ಜಾಮೀನು ನೀಡಲಾಯಿತು. ಸೋಮವಾರ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಿಶ್ರಾ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು.
ನ್ಯೂಯಾರ್ಕ್ ನಿಂದ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾ (AIR INDIA)ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಸಹ-ಪ್ರಯಾಣಿಕನ ಮೇಲೆ ಆರೋಪಿ ಶಂಕರ್ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ್ದರು. ಪ್ರತ್ಯಕ್ಷದರ್ಶಿಗಳ ವರದಿಗಳು ಮತ್ತು ಹೇಳಿಕೆಗಳ ಪ್ರಕಾರ, ಆ ವ್ಯಕ್ತಿ ಮತ್ತೆ ಅಲ್ಲಿ ನಿಂತಿದ್ದರು, ಅಲ್ಲಿಂದ ಇತರ ಪ್ರಯಾಣಿಕರು ತೆರಳುವಂತೆ ಕೇಳಿಕೊಂಡ ನಂತರ ಅಲ್ಲಿಂದ ಹೋಗಿದ್ದಾರೆ. ಈ ವಿಷಯವನ್ನು ಸಿಬ್ಬಂದಿಯ ಗಮನಕ್ಕೆ ತಂದರೂ ಯಾವುದೇ ಪರಿಣಾಮಕಾರಿ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ, ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದಿದ್ದಾರೆ. ಜನವರಿ 4ರಂದು ಆಕೆ ಶಂಕರ್ ಮಿಶ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು, ನಂತರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇದನ್ನು ಓದಿ :- ನೈಜೀರಿಯನ್ ಡ್ರಗ್ ಪೆಡ್ಲರ್ ಜೊತೆ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಲಿಂಕ್…!?
ಮಿಶ್ರಾ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆಯ ಆರೋಪ ಹೊರಿಸಲಾಗಿದ್ದು, ಅವರು 30 ದಿನಗಳ ಕಾಲ ವಿಮಾನಯಾನದೊಂದಿಗೆ ಹಾರಾಟ ನಡೆಸದಂತೆ ನಿರ್ಬಂಧಿಸಲಾಗಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಏರ್ ಇಂಡಿಯಾ ಮತ್ತು ಆ ವಿಮಾನದಲ್ಲಿದ್ದ ಸಿಬ್ಬಂದಿಗೆ ನೋಟಿಸ್ ನೀಡಿದೆ ಮತ್ತು ಅವರ ನಡವಳಿಕೆಯನ್ನು ‘ವೃತ್ತಿಪರವಲ್ಲ’ ಎಂದು ಹೇಳಿದೆ.
ಇದನ್ನು ಓದಿ :- ಕೃಷಿ ಆರ್ಥಿಕತೆ ಬೆಳೆಯಲು ವಿಶೇಷ ನೆರವು ನೀಡಲಾಗುವುದು – ಸಿಎಂ ಬೊಮ್ಮಾಯಿ