Breaking NewsPolitical NewsState News

ಕೃಷಿ ಆರ್ಥಿಕತೆ ಬೆಳೆಯಲು ವಿಶೇಷ ನೆರವು ನೀಡಲಾಗುವುದು – ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಕೃಷಿ ಆರ್ಥಿಕ ವ್ಯವಸ್ಥೆ ಬದಲಾವಣೆ ಆಗಬೇಕಿದೆ. ಈ ಬಗ್ಗೆ ಪರಿಣಿತರ ಜೊತೆ ಚರ್ಚೆ ನಡೆಸಲಾಗಿದೆ.

ರಾಜ್ಯದಲ್ಲಿ ಕೃಷಿ ಆರ್ಥಿಕ ವ್ಯವಸ್ಥೆ ಬದಲಾವಣೆ ಆಗಬೇಕಿದೆ. ಈ ಬಗ್ಗೆ ಪರಿಣಿತರ ಜೊತೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ಕೃಷಿ ಆರ್ಥಿಕತೆ ಬೆಳೆಯಲು ವಿಶೇಷ ನೆರವು ಕೂಡ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ(BASAVARAJ BOMMAI)  ಹೇಳಿದ್ದಾರೆ.

ಧಾರವಾಡ (DHARWAD)ದ ಕೃಷಿ ವಿಶ್ವವಿದ್ಯಾಲಯದ ನೂತನ ಯೋಜನೆಗಳ ಚಾಲನೆ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರನ್ನು ಕೂಲಿಕಾರರನ್ನು ಗಟ್ಟಿಗೊಳಿಸಿದರೆ ನಾಡು ಕಟ್ಟಬಹುದು. ದೊಡ್ಡ ದೊಡ್ಡ ಶ್ರೀಮಂತರಿಂದ ರಾಜ್ಯ ಕಟ್ಟಲು ಆಗುವುದಿಲ್ಲ. ಒಂದು ಕಾಲದಲ್ಲಿ ದುಡ್ಡೇ ದೊಡ್ಡಪ್ಪ ಅಂತಿದ್ದರು. ಈಗ ಅದು ಬದಲಾಗಿದೆ. 21ನೇ ಶತಮಾನದ ದುಡ್ಡಿದ್ದವರದ್ದಲ್ಲ, ದುಡಿಮೆ ಇದ್ದವರೇ ದೊಡ್ಡಪ್ಪ. ಈ ನಿಟ್ಟಿನಲ್ಲಿ ನಾನಾ ರೀತಿಯ ಅನೇಕ ಬದಲಾವಣೆ ಆಗಬೇಕಿದೆ. ಅದಕ್ಕಾಗಿ ನಾನು ಅನೇಕ ವರದಿಗಳನ್ನು ತರಿಸಿದ್ದೇನೆ ಎಂದರು.

Image
ರೈತ ಶಕ್ತಿ ಯೋಜನೆ, ಕೃಷಿ ಯಂತ್ರೋಪಕರಣ ಬಳಕೆಗೆ ಪ್ರೋತ್ಸಾಹ ಹಾಗೂ ಡಿಸೇಲ್ಗೆ ಸಬ್ಸಿಡಿ ನೀಡುವ ಯೋಜನೆಯಾಗಿದ್ದು, ಪ್ರತಿ ಎಕರೆಗೆ 250ರೂಪಾಯಿಯಂತೆ ಗರಿಷ್ಠ 5 ಎಕರೆಗೆ 1250ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. 51.80 ಲಕ್ಷ ರೈತರಿಗೆ 383.15 ಕೋಟಿ ರೂ. ಡಿಸೇಲ್ ಸಬ್ಸಿಡಿ ಈ ಯೋಜನೆ ಮೂಲಕ ನೀಡಲಾಗುತ್ತಿದೆ. ಮುಂದಿನ ಬದಲಾವಣೆ ನೋಡಿ ಕೃಷಿ ಉತ್ಪನ್ನ ಬೆಲೆ ನಿಗದಿ ಮಾಡಬೇಕಿದೆ. ಮುಂದಿನ ಮಳೆ, ಇತರೆ ಹವಾಮಾನ ಅರಿತು ಕೃಷಿಯಲ್ಲಿ ಬಂಡವಾಳ ಹಾಕಬೇಕಿದೆ.  ಇದನ್ನು ಓದಿ :- ನಾನ್ಯಾರಿಗೂ ಹೆದರಲ್ಲ… ಯಾರಿಗೂ ಬಗ್ಗಲ್ಲ ಗಂಡು ಮೆಟ್ಟಿದ ನಾಡಲ್ಲಿ ಹುಟ್ಟಿದವನು ನಾನು – ಜನಾರ್ದನ ರೆಡ್ಡಿ

ನಮ್ಮ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಆಗಿದೆ. ಮೊದಲು ವಿದೇಶದಿಂದ ಗೋಧಿ ತರಸಬೇಕಿತ್ತು. ಅಮೇರಿಕದಿಂದ ಕುದುರೆಗೆ ಹಾಕುವ ಗೋಧಿ ಕಳುಹಿಸುತ್ತಿದ್ದರು. ಆದರೆ ಇವತ್ತು ಭಾರತದಲ್ಲಿ 150 ಕೋಟಿ ಜನಸಂಖ್ಯೆ ಇದೆ. ಆದರೆ ಆಹಾರದ ಕೊರತೆ ಆಗುತ್ತಿಲ್ಲ. ಇದಕ್ಕೆಲ್ಲ ಕಾರಣ ರೈತರು. ನಮ್ಮ ಹಸಿವಿನ ಚೀಲದ ಹೊಟ್ಟೆಯನ್ನು ರೈತರು ತುಂಬಿಸುತ್ತಿದ್ದಾರೆ ಎಂದರು.
ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆ ತೆಗೆದರೂ ರೈತರ ಬದುಕು ಸುಧಾರಿಸಿಲ್ಲ. ಅದಕ್ಕಾಗಿ ರೈತರ ಮಕ್ಕಳು ವಿದ್ಯಾವಂತರಾಗಬೇಕೆಂದು ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆ ಮೂಲಕ 11 ಲಕ್ಷ ರೈತರ ಮಕ್ಕಳಿಗೆ 480 ಕೋಟಿ ಕೊಟ್ಟಿದ್ದೇವೆ. ದಾಖಲಾತಿ ಮಾಡಿಸುವ ಎಲ್ಲ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತೇವೆ. ನಾವು ಯಾರಿಂದಲೂ ಅರ್ಜಿ ಪಡೆದಿಲ್ಲ. ನಾವೇ ದಾಖಲೆ ಪಡೆದು ರೈತ ಶಕ್ತಿ ಮತ್ತು ರೈತ ವಿದ್ಯಾನಿಧಿ ಹಣ ಕೊಟ್ಟಿದ್ದೇವೆ ಎಂದರು.
ಅಧಿವೇಶನದಲ್ಲಿ ವಿರೋಧ ಪಕ್ಷಗಳು ರೈತರಿಗೆ ಏನು ಕೊಟ್ಟಿದ್ದೇರಿ ಅಂತಾ ಕೇಳುತ್ತಿದ್ದಾರೆ. ನಾನು ಅವರನ್ನು ಕೇಳುತ್ತೇನೆ ನೀವೆನು ಕೊಟ್ಟಿದ್ದೀರಿ? ಮಳೆಯಾದ ಎರಡೇ ತಿಂಗಳಿನಲ್ಲಿ ನಾವು ಮಳೆ ಹಾನಿ ಪರಿಹಾರ ಕೊಟ್ಟಿದ್ದೇವೆ. ಹಿಂದಿನ ಸರ್ಕಾರಗಳು ಕೊಡುತ್ತಿದ್ದ ಪರಿಹಾರಿಗಳ ಮೊತ್ತ ನಾವು ಏರಿಸಿ ಕೊಟ್ಟಿದ್ದೇವೆ. ರೈತರ ಮಕ್ಕಳ ಜೊತೆಗೆ ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ಕೊಡುತ್ತೇವೆ. ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಣೆ ಮಾಡಿದ್ದೇವೆ. ಆದೇಶ ಮಾಡಿ ಹಣ ಬಿಡುಗಡೆ ಮಾಡಿದ್ದೇವೆ ಎಂದರು.

Image

ಇವತ್ತು 47 ಸಾವಿರ ಕೂಲಿಕಾರರ ಮಕ್ಕಳಿಗೆ ಹಣ ಬಿಡುಗಡೆ ಮಾಡುತ್ತೇವೆ. ಇಲ್ಲಿವರೆಗೂ ಯಾರೂ ಅವರ ವಿಷಯ ಮಾತನಾಡಿರಲಿಲ್ಲ. ನನ್ನ ಮನಸ್ಸು ತಡೆಯಲಿಲ್ಲ, ಅವರು ಪಾಪ ಮನವಿ ಸಹ ಕೊಡುವುದಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ದುಡಿದು ಬರ್ತಾರೆ. ಅವರು ಮಕ್ಕಳು ಕಲಿಯಬೇಕು ಅಲ್ವಾ? ಅವರು ಗುಡಿಸಲಿನಿಂದ ಹೊರಗೆ ಬರಬೇಕು ಅಲ್ವಾ, ಅಂತಹ ಕ್ರಾಂತಿಕಾರಿ ಬದಲಾವಣೆ ನಾನು ಮಾಡಿದ್ದೇನೆ. ಬದಲಾವಣೆ ತಳಮಟ್ಟದಿಂದಲೇ ಬರಬೇಕು. ಯಾರೂ ಮಾಡದ ಕಾರ್ಯ ನಾನು ಮಾಡಿದ್ದೇನೆ. ಇದರಿಂದ ನನಗೆ ಸಂತೋಷ ಆಗಿದೆ ಎಂದು ತಿಳಿಸಿದ್ರು.

ಇದನ್ನು ಓದಿ :- ಈಶ್ವರಪ್ಪ ಬಾಯಿ ಬಿಟ್ಟರೆ ಸಾಕು ಮನುಷ್ಯನ ನೀಚ ಸಂಸ್ಕಾರ ಆಚೆಗೆ ಬರುತ್ತದೆ – ಕಾಂಗ್ರೆಸ್ ಟ್ವೀಟ್

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!