ರಾಷ್ಟ್ರಪತಿ ಮಾಡುತ್ತೇನೆ ಎಂದರೂ ಬಿಜೆಪಿಗೆ ಹೋಗಲ್ಲ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯಗೆ ಸಿ.ಟಿ.ರವಿ (C.T RAVI) ತಿರುಗೇಟು ನೀಡಿದ್ದಾರೆ. ರಾಮನಗರ ( RAMANAGAR) ದ ಅಚ್ಚಲು ಗ್ರಾಮದಲ್ಲಿ ಮಾತನಾಡಿದ ಅವರು, ಮನುಷ್ಯನ ಹೆಣಕ್ಕೆ ಮೂರು ಕಾಸಿನ ಬೆಲೆಯೂ ಇಲ್ಲ. ಹೆಣ ತಗೊಂಡು ರಾಜಕಾರಣ ಮಾಡಲು ಆಗಲ್ಲ. ಹೆಣ ಎದ್ದು ಬಂದು ಓಟು ಹಾಕುತ್ತಾ..? ಹಣವನ್ನ ಯಾರು ಕೂಡ ಮನೆಯಲ್ಲಿ 3 ದಿನ ಇಟ್ಟುಕೊಳ್ಳುವುದಿಲ್ಲ. ಸಿದ್ದರಾಮಯ್ಯ ನೂರು ವರ್ಷ ಬದುಕಿರಲಿ ಅವರು ಹೆಣವಾಗಿ ಬರುವುದು ಬೇಡ. ಅವರಿಲ್ಲದೇ ಬಿಜೆಪಿ ಕೇಂದ್ರದಲ್ಲಿ ನಾಲ್ಕನೇ ಬಾರಿ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಕೂಡ ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ಹತಾಶೆಯಿಂದ ಹೆಣದ ರಾಜಕಾರಣ ಮಾತನಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ (SIDDARAMAIAH)ಅವರಿಗೆ ಸಿದ್ರಾಮುಲ್ಲಾ ಖಾನ್ ಎಂದು ಕರೆಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ, ಅವರ ನೀತಿಗೆ, ಅವರ ನಡುವಳಿಕೆಗೆ ರಾಜ್ಯದ ಜನರು ಇಟ್ಟ ಹೆಸರು. ನಾನಲ್ಲ. ಹುಲಿಯಾ ಎಂದು ಅವರ ತಂದೆ ತಾಯಿ ಇಟ್ಟಿದ್ದರಾ..? ನನ್ನನ್ನ ಹಿಂದೂ ಹುಲಿ ಸಿಟಿ ರವಿ ಎನ್ನುತ್ತಾರೆ. ನಮ್ಮ ಅಪ್ಪ ಇಟ್ಟ ಹೆಸರಾ..? ಪ್ರೀತಿಯಿಂದ ಜನಕೊಟ್ಟ ಅಬಿಧಾನ. ಎಸ್.ಡಿ.ಪಿ.ಐ ಗೆ ಸಿದ್ದರಾಮಯ್ಯ ಬೆಂಬಲ ಕೊಟ್ಟರು, ಎಸ್ಡಿಪಿಐ ಯಾರ ಮೇಲೆ ಕತ್ತಿ ಹಿಡಿದಿದ್ದು? ಪಿಎಫ್ಐ ಕತ್ತಿ ಹಿಡಿದಿದ್ದು ತನ್ವಿರ್ ಸೇಠ್ ಮೇಲೆ. ನಮ್ಮ ಶಾಸಕನ ಮೇಲೆ ಅಲ್ಲ. ಡಿಜಿ ಹಳ್ಳಿ, ಕೆಜಿ ಹಳ್ಳಿ ಗ್ಯಾಂಗ್ ಮತ್ತೆ ಆಕ್ವೀಟ್ ಆಗಬೇಕಾ? ಅಖಂಡ ಶ್ರೀನಿವಾಸ್ ಮೂರ್ತಿ ಬಿಜೆಪಿ ಶಾಸಕ ಅಲ್ಲ, ಅವರದ್ದೇ ಪಾರ್ಟಿಯಾ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದ್ದ ಗ್ಯಾಂಗ್. ಅವರಿಗೆ ಬೆಂಬಲ ಕೊಡುವ ನೀತಿ, ಕಾಂಗ್ರೆಸ್ ಪಕ್ಷದ ನೀತಿ ಎಂದರು.
ಜಾತಿ ಜಾತಿಗಳ ಮಧ್ಯೆ ಎತ್ತಿಕಟ್ಟುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ, ಸಿದ್ದರಾಮಯ್ಯನವರಿಗೆ ಸುಳ್ಳು ಹೇಳುವುದು ಹುಟ್ಟು ಗುಣ, ಹಳೇ ಕಾಯಿಲೆ. ಅವರಿಗೆ ಬೇಕಾದಾಗ ಅಹಿಂದ ರಾಜಕಾರಣ ಮಾಡಿದರು. ಅಧಿಕಾರಕ್ಕೆ ಬಂದಾಗ ಅಹಿಂದವನ್ನ ದೂರಕ್ಕೆ ಇಟ್ಟುಬಿಟ್ಟರು. ಅವರು ಅಧಿಕಾರದಲ್ಲಿ ಇದ್ದಾಗ ಒಂದು ಆರೋಪ ಕೇಳಿ ಬರುತ್ತಿತ್ತು. ಜಿಲೆಬಿ ಕಂಡರೇ ಆಗದಿರುವ ಆರೋಪ ಇತ್ತು ಜಿಲೆಬಿ ಅಂದರೆ ತಿನ್ನುವ ಜಿಲೆಬಿ ಅಲ್ಲ, ಗೌಡ, ಲಿಂಗಾಯತ, (LINGAYATHA) ಬ್ರಾಹ್ಮಣ ಕಂಡರೇ ಆಗದಿರುವ ರಾಜಕಾರಣ ಮಾಡಿದ್ದರು. ಅಧಿಕಾರದಲ್ಲಿ ಇದ್ದಾಗ ಅವರ ಮೇಲೆ ಆರೋಪ ಇತ್ತು. ಇದು ಜನರನ್ನ ಪ್ರೀತಿಸುವ ರಾಜಕಾರಣಾನಾ..? ಹಿಂದೂ ಆದವರು ರಾಮಮಂದಿರ ಕಟ್ಟಲು ವಿರೋಧ ಮಾಡುತ್ತಾರಾ? ಹಿಂದೂ ಆದವರು ಟಿಪ್ಪು ಜಯಂತಿ ಆಚರಿಸಲು ಹೋಗಲ್ಲ. ನಾಲ್ವಡಿ ಕೃಷ್ಣರಾಜ ಜಯಂತಿ ಆಚರಿಸುತ್ತಾರೆ. ಸಿದ್ದರಾಮಯ್ಯನವರದ್ದು ಅನುಕೂಲಕ್ಕೆ ತಕ್ಕಂತ ನಡುವಳಿಕೆ. ಕುಂಕುಮ ಕಂಡರೇ ಆಗದಿರುವವರು ಯಾವ ಸೀಮೆ ಹಿಂದೂ? ಕೇಸರಿ ಕಂಡರೇ ಅಲರ್ಜಿ ಬೆಳೆಸಿಕೊಂಡಿರುವವರು ಎಲ್ಲರನ್ನು ಪ್ರೀತಿಸುವ ಜನನಾ? ಭಾರತದ ರಾಷ್ಟಧ್ವಜದಲ್ಲೇ ಕೇಸರಿ ಇದೆ. ಹಾಗಂತ ಕೇಸರಿ ದೂರ ಇಟ್ಟುಬಿಡುತ್ತಾರಾ? ಸ್ವಾಮೀಜಿಗಳು ಧರಿಸುವ ಬಟ್ಟೆಯೇ ಕೇಸರಿ. ಸ್ವಾಮೀಜಿಗಳ ಆಶಿರ್ವಾದ ಬೇಕು, ಆದರೆ ಕೇಸರಿ ಕಂಡರೇ ಆಗಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ :- ನೈಜೀರಿಯನ್ ಡ್ರಗ್ ಪೆಡ್ಲರ್ ಜೊತೆ ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಲಿಂಕ್…!?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K SHIVKUMAR) ಮಾತನಾಡಿದ್ದು ಎನ್ನಲಾದ ಆಡಿಯೋವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಸಿಡಿ ಕೇಸ್ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರಬೇಕು ಎಂದು ಹೇಳಿದ್ರು.
ರಾಮನಗರದ ರಾಮದೇವರಬೆಟ್ಟ (RAMADEVARA BETTA) ದಲ್ಲಿ ರಾಮಮಂದಿರ ನಿರ್ಮಾಣ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ರಾಮದೇವರಬೆಟ್ಟ ಎಂದು ನಾವು ಇಟ್ಟ ಹೆಸರಾ? ರಾಮನಗರ ಎಂದು ಹೆಸರು ಬರಲು ಹಿನ್ನೆಲೆ ಏನು? ಇದನ್ನ ಉಳಿಸಬೇಕಾ? ಬೇಡವಾ? ನಮ್ಮ ಮೇಲೆ ಆರೋಪ ಮಾಡುವವರು ರಾಮಮಂದಿರಾ ನಿರ್ಮಾಣಕ್ಕೆ ಯಾಕೆ ವಿರೋಧ ಮಾಡಿದರು? ಶುದ್ದ ಹಿಂದೂಗಳು ಆದರೆ ರಾಮಮಂದಿರಾ ನಿರ್ಮಾಣಕ್ಕೆ ವಿರೋಧ ಮಾಡಲ್ಲ. ಇವರುಗಳು ಯಾಕೆ ವಿರೋಧ ಮಾಡಿದರು? ಮಂದಿರ ಕಟ್ಟಬೇಡಿ ಎಂದು ಯಾರಾದರೂ ಕಟ್ಟಿಹಾಕಿದ್ದಾರಾ? ಮಂದಿರ ಕಟ್ಟಿ ತೋರಿಸಬೇಕಿತ್ತು, ಯಾರು ಬೇಡ ಎಂದಿದ್ದಾರೆ ಎಂದು ಪ್ರಶ್ನಿಸಿದ್ರು.
ಇದನ್ನು ಓದಿ :- ಕೃಷಿ ಆರ್ಥಿಕತೆ ಬೆಳೆಯಲು ವಿಶೇಷ ನೆರವು ನೀಡಲಾಗುವುದು – ಸಿಎಂ ಬೊಮ್ಮಾಯಿ