ಸೂಕ್ತ ಬೆಲೆ ಸಿಗದ ಕಾರಣ ಮೈಸೂರಿನ ರೈತ ತಾನು ಬೆಳೆದಿದ್ದ ಕುಂಬಳಕಾಯಿಗಳನ್ನು ಧರ್ಮಸ್ಥಳಕ್ಕೆ ದಾನ ಮಾಡಿದ್ದಾನೆ!
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸೀಗೆಕೊರೆ ಕೊಪ್ಪಲು ಗ್ರಾಮದ ಭುಜಂಗ ಆರಾಧ್ಯ ತಾವು ಬೆಳೆದಿದ್ದ ಕುಂಬಳಕಾಯಿಗಳನ್ನು ಧರ್ಮಸ್ಥಳಕ್ಕೆ ಕಳುಹಿಸಿಕೊಟ್ಟರು.
ಭುಜಂಗ ಆರಾಧ್ಯ ತಮ್ಮ 9 ಎಕರೆ ಜಮೀನಿನಲ್ಲಿ ಉತ್ತಮ ಕುಂಬಳಕಾಯಿ ಬೆಳೆ ಪಡೆದಿದ್ದರು. ಆದರೆ ಮಾರುಕಟ್ಟಯಲ್ಲಿ ಉತ್ತಮ ಬೆಲೆ ದೊರೆಯದ ಕಾರಣ ನಿರಾಸೆಗೊಂಡು ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಅರ್ಪಿಸಿದರು.