ಬೆಂಗಳೂರು: ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಕೊರೋನಾ ಸಮಯದಲ್ಲೂ ಬಾಕ್ಸಾಫೀಸ್ ಚಿಂದಿ ಮಾಡಿದ ಸಿನಿಮಾವಿದು. ಇದೀಗ ಬ್ಯಾಕ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ರಾಬರ್ಟ್ ಸಿನಿಮಾವನ್ನ ಥೀಯೇಟರ್‍ನಿಂದ ತೆಗೆಯುವ ನಿರ್ಧಾರ ಮಾಡಲಾಗಿತ್ತು.
ಮುಖ್ಯ ಥಿಯೇಟರ್ ಸಂತೋಷ್‍ನಲ್ಲಿ ರಾಬರ್ಟ್ ಸಿನಿಮಾ ತೆಗೆದು ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾ ರಿಲೀಸ್ ಮಾಡಬೇಕೆಂಬ ನಿರ್ಧಾರಕ್ಕೆ ಡಿಸ್ಟ್ರಿಬ್ಯೂಟರ್ಗಳು ಬಂದಿದ್ದರು. ಕರ್ನಾಟಕದಲ್ಲಿ ಕಾರ್ತಿಕ್ ಗೌಡ ಈ ಚಿತ್ರದ ವಿತರಣೆಯ ಜವಬ್ದಾರಿ ಹೊತ್ತಿದ್ದಾರೆ. ಆದ್ರೆ ದರ್ಶನ್ ಅಭಿಮಾನಿಗಳಿಂದ ರಾಬರ್ಟ್ ಸಿನಿಮಾವನ್ನು ಚಿತ್ರಮಂದಿರದಿಂದ ತೆಗೆಯೋದಕ್ಕೆ ವಿರೋಧ ವ್ಯಕ್ತವಾಗಿದೆ.
ಅಭಿಮಾನಿಗಳ ವಿರೋಧದ ಹಿನ್ನೆಲೆ ವಿತರಕರು ರಾಬರ್ಟ್ ಸಿನಿಮಾವನ್ನ ತೆಗೆಯದೆ ಇರಲು ನಿರ್ಧರಿಸಿದ್ದಾರೆ. ಈ ಸಂಬಂಧ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದು, ಭೂಮಿಕ ಥಿಯೇಟರ್‍ನಲ್ಲಿ ವಕೀಲ್ ಸಾಬ್ ಸಿನಿಮಾ ಪ್ರದರ್ಶಿಸಲಾಗುತ್ತದೆ. ಸಂತೋಷ್ ಚಿತ್ರಮಂದಿರದಲ್ಲಿ ರಾಬರ್ಟ್ ಚಿತ್ರವನ್ನು ತೆಗೆಯಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಡಿ ಬಾಸ್ ಅಭಿಮಾನಿಗಳು ಸಂತಸದಲ್ಲಿದ್ದು, ತಮ್ಮ ಇಷ್ಟದ ನಾಯಕನ ಚಿತ್ರವನ್ನು ಚಿತ್ರಮಂದಿರದಿಂದ ತೆಗೆಯದೇ ಇರುವುದಕ್ಕೆ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.