ಚಿಕ್ಕಬಳ್ಳಾಪುರ: ಫಸಲಿಗೆ ಬಂದಿದ್ದ ಸೀಬೆ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ ಪರಿಣಾಮ ಸೀಬೆ ತೋಟ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದ ಬಳಿ ನಡೆದಿದೆ.
ಗ್ರಾಮದ ಡಿ.ಎನ್.ವಿಶ್ವನಾಥರಾವ್ ಎಂಬುವರ 2 ಎಕರೆ 20 ಗುಂಟೆ ಜಾಗದಲ್ಲಿ ಸಾಲ ಮಾಡಿ ಸೀಬೆ ಗಿಡದ ತೋಟ ಮಾಡಿದ್ದು, ಫಸಲಿಗೆ ಬಂದಿದ್ದ ಸೀಬೆಗಿಡದ ತೋಟಕ್ಕೆ ಯಾರೋ ದುಷ್ಕರ್ಮಿಗಳು ತಡರಾತ್ರಿ ಬೆಂಕಿ ಹಚ್ಚಿದ ಪರಿಣಾಮವಾಗಿ ಸೀಬೆಗಿಡಗಳು ಹಾಗೂ ಡ್ರಿಪ್ ಇರಿಗೇಶನ್ ನ ಪೈಪುಗಳು ಸುಟ್ಟು ಹೋಗಿದೆ. ಇದರಿಂದಾಗಿ ಸುಮಾರು 8 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆ.
ಸಂತ್ರಸ್ತರಿಗೆ ವ್ಯವಸಾಯವೇ ಜೀವನಕ್ಕೆ ಆಧಾರವಾಗಿದ್ದು, ಈ ಬೆಳೆಯ ನಾಟಿಗಾಗಿ ಬ್ಯಾಂಕಿನಲ್ಲಿ 2 ಲಕ್ಷ ಹಾಗೂ 5 ಲಕ್ಷಗಳ ಕೈಸಾಲ ಮಾಡಿದ್ದು, ಕೈಗೆ ಬಂದ ಬೆಳೆ ಕೈಗೆ ಬಾರದೆ ರೈತ ಕಂಗಾಲಾಗಿದ್ದಾನೆ.