ಕಳೆದ 24 ಗಂಟೆಯಲ್ಲಿ 1,68,912 ಹೊಸದಾಗಿ ಕೊರೊನಾ ಸೋಂಕು ಪ್ರಕರಣಗಳು ವರದಿಯಾದ ಬೆನ್ನಲ್ಲೇ ಭಾರತ ಕೊರೊನಾ ಪೀಡಿತ ದೇಶಗಳ ಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1.35 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಬ್ರೆಜಿಲ್ ಹಿಂದಿಕ್ಕಿದ್ದ ಭಾರತ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಅಮೆರಿಕ ಮೊದಲ ಸ್ಥಾನದಲ್ಲಿದೆ.
ಬ್ರೆಜಿಲ್ ನಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1.34 ಕೋಟಿ ಇದ್ದರೆ, ಅಮೆರಿಕದಲ್ಲಿ 3.12 ಕೋಟಿ ಇದೆ.
ಭಾರತದಲ್ಲಿ ಸಾವಿನ ಸಂಖ್ಯೆ 1,70,179ಕ್ಕೆ ಜಿಗಿತ ಕಂಡಿದೆ. 10 ಕೋಟಿಗೂ ಅಧಿಕ ಮಂದಿಗೆ ಇದುವರೆಗೆ ಲಸಿಕೆ ಹಾಕಲಾಗಿದೆ. ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಚತ್ತೀಸ್ ಗಢ, ಕೇರಳ ಮತ್ತು ಉತ್ತರ ಪ್ರದೇಶಗಳಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.