ಜ್ಞಾನವಾಪಿ ಮಸೀದಿ (Gyanvapi Mosque ) ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (SC) ನಾಳೆಗೆ ಮುಂದೂಡಿದೆ. ನಾಳೆ ಅಪರಾಹ್ನ 3 ಗಂಟೆಗೆ ವಾದ ಪ್ರತಿವಾದ ಆಲಿಸಿ ತೀರ್ಪು ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ವಾರಣಾಸಿಯ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಈ ಮಧ್ಯೆ, ಜ್ಞಾನವಾಪಿ ಮಸೀದಿ ಸಮೀಕ್ಷೆ ಕುರಿತು ನ್ಯಾಯಾಲಯ ನೇಮಿಸಿದ ವಿಶೇಷ ಸಹಾಯಕ ಆಯುಕ್ತರ ವರದಿಯನ್ನು ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಎರಡೂ ಕಡೆಯ ಕಕ್ಷಿದಾರರು ನ್ಯಾಯಾಲಯದ ಮುಂದೆ ಹಾಜರಾಗಲಿದ್ದು, 10-15 ಪುಟಗಳ ಸುದೀರ್ಘ ವರದಿಯಾಗಿದೆ ಎಂದು ನ್ಯಾಯಾಲಯದ ಸಹಾಯಕ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಇರುವುದನ್ನು ಮುಸಲ್ಮಾನರು ನಿರಾಕರಿಸುತ್ತಲೇ ಬಂದಿದ್ದಾರೆ. ಶಿವಲಿಂಗ (Shivalinga)ಕಂಡುಬಂದಿದೆ ಎಂದು ಹೇಳಲಾದ ಸ್ಥಳವನ್ನು ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಯಾಗದಂತೆ ‘ರಕ್ಷಿತ ಪ್ರದೇಶ’ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇದೇ ಸಂದರ್ಭದಲ್ಲಿ ಇಂದು ಯಾವುದೇ ಆದೇಶ ಹೊರಡಿಸದಂತೆ ವಾರಣಾಸಿ ಕೋರ್ಟ್ (Varanasi court) ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ : – ಸಾವಿರದ ಗಡಿ ದಾಟಿದ ಅಡುಗೆ ಅನಿಲ ಬೆಲೆ – ಇಂದು ಮತ್ತೆ ಮೂರುವರೆ ರೂಪಾಯಿ ಹೆಚ್ಚಳ