ಇದು ರಾಜ್ ನ್ಯೂಸ್ ಸೂಪರ್ ಎಕ್ಸ್ ಕ್ಲೂಸಿವ್ ಸ್ಟೋರಿ. ಅಕ್ರಮ ಗಳಿಕೆ ಆಸ್ತಿ ಆರೋಪದಲ್ಲಿ ಹಾಲಿ ಸಚಿವರೊಬ್ಬರಿಗೆ ಸಂಕಷ್ಟ ಎದುರಾಗಿದೆ. ಸಚಿವರ ಆಸ್ತಿ ಸಂಬಂಧ ಎಸಿಬಿ ಕ್ಲೀನ್ ಚಿಟ್ ವರದಿ ಸಲ್ಲಿಕೆ ನೀಡಿದೆ ಎನ್ನಲಾಗಿದೆ. ಎಸಿಬಿ ಕ್ಲೀನ್ ಚಿಟ್ ಕೊಟ್ರೂ ಸಚಿವರಿಗೆ ಸಂಕಷ್ಟ ಎದುರಾಗಿದೆ. ಅಂದ್ ಹಾಗೆ ಆ ಸಚಿವರು ಯಾರು ಗೊತ್ತಾ ವಸತಿ ಸಚಿವ ವಿ. ಸೋಮಣ್ಣ. ಹೌದು ವಸತಿ ಸಚಿವ ಸೋಮಣ್ಣಗೆ ಅಕ್ರಮ ಆಸ್ತಿ ಸಂಕಷ್ಟ ಎದುರಾಗಿದೆ. ,ಚಿವ ಸೋಮಣ್ಣ ವಿರುದ್ದ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಕ್ರಿಮಿನಲ್ ಕೇಸ್ ರಿಜಿಸ್ಟರ್ ಆಗಿದೆ.
ಕೇಸ್ ರಿಜಿಸ್ಟರ್ ಮಾಡಿ ಸಚಿವ ಸೋಮಣ್ಣಗೇ ಸಮನ್ಸ್ ನೀಡಲಾಗಿದೆ. ಏಪ್ರಿಲ್ 16 ಕ್ಕೆ ಖುದ್ದು ಹಾಜರಾಗಲು ಸಮನ್ಸ್ ಜಾರಿ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಸೋಮಣ್ಣ ವಿರುದ್ಧ 2013 ರಲ್ಲಿ ರಾಮಕೃಷ್ಣ ಎಂಬುವವರು ದೂರು ನೀಡಿದ್ದರು. ದೂರು ಆಧರಿಸಿ 2016ರಲ್ಲಿ ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿತ್ತು. ತನಿಖೆ ನಡೆಸಿ ಎಸಿಬಿ ಅಧಿಕಾರಿಗಳು ಕ್ಲಿನ್ ಚಿಟ್ ವರದಿ ನೀಡಿದ್ದರು. ಎಸಿಬಿ ನೀಡಿದ ವರದಿಯನ್ನ ಸರಾಸಗಟಾಗಿ ಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಸಚಿವ ಸೋಮಣ್ಣಗೆ ಸಂಕಷ್ಟ ಎದುರಾಗಿದೆ.
ವರದಿ- ರೇಷ್ಮಾ, ಪೊಲಿಟಿಕಲ್ ಬ್ಯೂರೋ ರಾಜ್ ನ್ಯೂಸ್ ಕನ್ನಡ
ಇದನ್ನೂ ಓದಿ –ಪುನೀತ್ ಗೆ ಮರಣೋತ್ತರ ಗೌರವ ಡಾಕ್ಟರೇಟ್