ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಚಡ್ಡಿ ತಲುಪಿಸಿ ಆಕ್ರೋಶ ಹೊರ ಹಾಕಿದ್ದಾರೆ. ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಿದ್ದು ನಿವಾಸಕ್ಕೆ ಚಡ್ಡಿ ತಲುಪಿದೆ.
ನಂತರ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಚಡ್ಡಿ ಮಾನವ ಕುಲವನ್ನು ಗೌರವದಿಂದ ಕಾಣುವ ಸಂಕೇತ. ಚಡ್ಡಿ ಹಾಕುವಂತವರು ಮಿಲಿಟರಿ, ಪೊಲೀಸರು, ರೈತರು ಇದ್ದಾರೆ. ಆದರೆ, ಚಡ್ಡಿ ಹಾಕಿರುವ ಎಲ್ಲರನ್ನು ಸಿದ್ದರಾಮಯ್ಯ ಅಪಮಾನ ಮಾಡಿದ್ದಾರೆ ಎಂದು ಹೇಳಿದ್ರು. ಚಡ್ಡಿ ಸುಡುವುದಾದರೆ ಕಾಂಗ್ರೆಸ್ ನವರ ಚಡ್ಡಿ ಸುಟ್ಕೋಳಿ. ದೇಶದಲ್ಲಿ ಜನರು ಇಡೀ ಕಾಂಗ್ರೆಸ್ ನವರ ಚಡ್ಡಿ ಸುಟ್ಟಿದ್ದಾರೆ. ಇನ್ನೊಂದು ಚಡ್ಡಿ ಸುಟ್ಟು ಬೆತ್ತಲೆ ಆಗಬೇಡಿ ಎಂದರೂ ಕೇಳ್ತಿಲ್ಲ. ಅದಕ್ಕಾಗಿ ಇವಾಗ ಅವರಿಗೆ ಚಡ್ಡಿ ಕೊಡಲು ಬಂದಿದ್ದೇವೆ. ಅವರು ಎಷ್ಟು ಚಡ್ಡಿ ಸುಡ್ತಾರೋ ಅಷ್ಟು ಚಡ್ಡಿಗಳನ್ನು ಅವರಿಗೆ ತಲುಪಿಸುತ್ತೇವೆ. ಇದನ್ನೂ ಓದಿ : – RSS ಈ ದೇಶಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ – ವಿ. ಸೋಮಣ್ಣ
ಕಾಂಗ್ರೆಸ್ ನವರು ಚಡ್ಡಿ ಸುಡುತ್ತಾನೇ ಇರಲಿ. ಇವತ್ತು ಆರ್ ಎಸ್ ಎಸ್ ಗುರಿ ಮಾಡಿ ಹೇಳಿರಬಹುದು. ಇವತ್ತು ಆರ್ ಎಸ್ ಎಸ್ ಇಲ್ಲ ಅಂದಿದ್ರೆ ನಿಮ್ಮ ಚಡ್ಡಿಯನ್ನೇ ಕಿತ್ತುಕೊಂಡು ಹೋಗ್ಬಿಡ್ತಿದ್ರು. ಇನ್ಮುಂದೆ ನಿಮ್ಮ ಚಡ್ಡಿಯನ್ನು ಭದ್ರ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರಿಗೆ ಚಡ್ಡಿ ತಂದ ಕಾರ್ಯಕರ್ತರನ್ನೂ ವಿಪಕ್ಷ ನಾಯಕರ ಮನೆಯತ್ತ ಬಿಡದ ಪೊಲೀಸರು ಅವರನ್ನು ಅರ್ಧದಲ್ಲಿಯೇ ತಡೆದರು. ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ಸೇರಿದಂತೆ ಇನ್ನಿತರ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಇದನ್ನೂ ಓದಿ : – RSS ಕಚೇರಿಗಳ ಮೇಲೆ ದಾಳಿ ಬೆದರಿಕೆ ಸಂದೇಶ – ರಾಜ್ಯದ ಸಂಘದ ಕಚೇರಿಗಳಿಗೆ ಬಿಗಿ ಭದ್ರತೆ