ತಾಂಬೂಲ ಪ್ರಶ್ನೆ ವಿಚಾರವಾಗಿ ರಾಜ್ಯದ ಜನರ ಮೇಲೆ ಮೂಢನಂಬಿಕೆ ಹೇರುತ್ತಿದ್ದಾರೆಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ದೇವೇಗೌಡರ ವಂಶ ನನಗೂ ಒಂದು ಆದರ್ಶ. ದೇವರು, ಧರ್ಮದ ಬಗ್ಗೆ ಆ ವಂಶ ಇಟ್ಟುಕೊಂಡ ನಂಬಿಕೆಯನ್ನು ಎಲ್ಲಾ ಕುಟುಂಬದವರು ಇಟ್ಟುಕೊಳ್ಳಬೇಕು. ರಾಜಕಾರಣಕ್ಕಾಗಿ ಕುಮಾರಸ್ವಾಮಿ ಏನೋ ಒಂದು ಹೇಳಿದರೆ ನಾನು ಟೀಕೆ ಮಾಡಲ್ಲ. ಮಸೀದಿ ರಿಪೇರಿ ಮಾಡೋವಾಗ ದೇವರುಗಳು ಸಿಕ್ಕಿವೆ. ಅದೇ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ಮನೆಯಲ್ಲಿನ ದೇವಸ್ಥಾನ ಪುಡಿ ಮಾಡಿದ್ರೆ ಸುಮ್ಮನಿರುತ್ತಿದ್ದಾರಾ..? ಎಂದು ಹೆಚ್.ಡಿ.ಕೆ ಗೆ ತಿರುಗೇಟು ನೀಡಿದ್ರು. ಇದನ್ನೂ ಓದಿ :- ಸ್ಥಳದಲ್ಲಿ ದೇವರು ಇರುವುದು ನಿಜ – ಕೇರಳದ ದೈವಜ್ಞರಿಂದ ಉತ್ತರ
ಕುಮಾರಸ್ವಾಮಿ ತಂದೆ ದೇವೇಗೌಡರು ಒಳ್ಳೆಯ ಕೆಲಸ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಹೆಚ್ಚು ಟೀಕೆ ಮಾಡೋಕೆ ಹೋಗಲ್ಲ. ದೇವೇಗೌಡರು ಮತ್ತು ಯಡಿಯೂರಪ್ಪ ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸ ಮಾಡಿ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು. ಕಾಶಿ, ಮಥುರಾ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಲಿ. ರಾಮಮಂದಿರ ಬಗ್ಗೆ ಟೀಕೆ ಮಾಡಿದರು. ಇವತ್ತಲ್ಲ ನಾಳೆ ಭವ್ಯ ರಾಮಮಂದಿರ ನಿರ್ಮಾಣವಾಗುತ್ತೆ. ಅದೇ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ದೇವೇಗೌಡರು ರಾಮಮಂದಿರಕ್ಕೆ ಹೋಗಿ ದರ್ಶನ ಮಾಡೋ ಕಾಲ ದೂರವಿಲ್ಲ ಎಂದರು. ಮೊನ್ನೆ ಡಿಕೆ ಶಿವಕುಮಾರ್ ದಂಪತಿ ಸಮೇತ ಕೇದಾರನಾಥ ದೇಗುಲಕ್ಕೆ ಹೋಗಿದ್ದರು ಸಂತೋಷ. ಮುಸ್ಲಿಂ ವೋಟು ಬೇಕು ಟೀಕೆ ಮಾಡಲಿ. ಆದರೆ ತಾನೊಬ್ಬ ಹಿಂದೂ ಅನ್ನೋ ಮನೋಭಾವನೆ ಇದೆಯಲ್ಲಾ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಲ್ಲಿ ಒಳಗಡೆ ದೈವಭಕ್ತಿ ಇದೆ. ಮುಸ್ಲಿಮರ ವೋಟಿಗಾಗಿ ನಾಟಕ ಮಾಡ್ತಿದ್ದಾರೆ ಎಂದು ಹೇಳಿದ್ರು. ಇದನ್ನೂ ಓದಿ :- ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ?
ಬಿ.ವೈ.ವಿಜಯೇಂದ್ರಗೆ ಎಮ್. ಎಲ್. ಸಿ ಟಿಕೆಟ್ ತಪ್ಪಿದ ವಿಚಾರ
ಯಾಕೆ ಅದೊಂದನ್ನೇ ಕೇಳ್ತಿರಿ. ಲಕ್ಷಾಂತರ ಜನರು ಟಿಕೆಟ್ ತಪ್ಪಿದವರು ಇದ್ದಾರೆ. ಯಡಿಯೂರಪ್ಪ,ವಿಜಯೇಂದ್ರ ಸ್ಪಷ್ಟವಾಗಿ ಹೇಳಿದ್ದಾರೆ. ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ದ ಅಂತ ಹೇಳಿದ್ದಾರೆ. ಅಷ್ಟಕ್ಕೆ ನೀವು ವಿಜಯೇಂದ್ರ ವಿಜಯೇಂದ್ರ ನೆನಪು ಮಾಡ್ತೀರಿ… ರಾಘವೇಂದ್ರ ದೇವರು ಅಂತ ನೆನಪು ಮಾಡಿಕೊಂಡ ಹಾಗಾಯ್ತು ನಿಮ್ದು. ಎಷ್ಟು ಜನರು ಅರ್ಜಿ ಹಾಕಿದ್ದಾರೆ. ಅವರ ಬಗ್ಗೆ ಯಾಕೆ ಕೇಳೋದಿಲ್ಲ.. 30-40 ವರ್ಷ ಕೆಲಸ ಮಾಡಿದ ಕಾರ್ಯಕರ್ತರಿಗೆ ಸಿಕ್ಕಿಲ್ಲ. ಅವರೆಲ್ಲ ಸುಮ್ಮನಿದಾರೆ ಇಲ್ವೊ. ನಮ್ಮ ಲಿಂಗರಾಜ ಪಾಟೀಲ್ ಕೂಡ ಟಿಕೆಟ್ ಸಿಗದಿದ್ದಕ್ಕೆ ಸುಮ್ಮನಿದ್ದಾರೆ. ಅವರ ಬಗ್ಗೆ ಯಾಕೆ ಕೇಳ್ತಿಲ್ಲ. ನಿಮಗೂ ರಾಜಕೀಯ ಮಾಡುವ ಚಟ ಎಂದು ಮಾಧ್ಯಮದವರ ಪ್ರಶ್ನೆಗೆ ಗರಂ ಆಗಿ ಉತ್ತರ ನೀಡಿದ್ರು .ಇದನ್ನೂ ಓದಿ : – ಡಿ ಕೆ ಶಿವಕುಮಾರ್ ಗೆ ಬಿಗ್ ಶಾಕ್ – ಜಾರಿ ನಿರ್ದೇಶನಾಲಯದಿಂದ ಚಾರ್ಜ್ ಶೀಟ್ ಸಲ್ಲಿಕೆ
ಗುತ್ತಿಗೆದಾರ ಆತ್ಮಹತ್ಯೆ ಕೇಸ್ ನಡೆಯುತ್ತಿರೋ ವಿಚಾರ
ನಾನು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಬಂದೆ…ಚೌಡೇಶ್ವರಿ ನನ್ನ ಮನೆ ದೇವರು.. ನಾನೇನಾದ್ರೂ ತಪ್ಪು ಮಾಡಿದ್ರೆ ಚೌಡೇಶ್ವರಿ ನನಗೆ ಶಿಕ್ಷೆ ನೀಡಲಿ.. ನಾನು ತಪ್ಪು ಮಾಡಿಲ್ಲ ಅಂದ್ರೆ ಶಿಕ್ಷೆಯಿಂದ ಹೊರಬರಲಿ ಇದು ನನ್ನ ನಂಬಿಕೆ. ಇದಕ್ಕೆ ಇನ್ನೊಂದು ವಾರ ಅಥವಾ 15 ದಿನದಲ್ಲಿ ಒಂದು ರೂಪ ಬರುತ್ತೇ ಅಂದುಕೊಂಡಿದ್ದೀನಿ. ಸಚಿವ ಸಂಪುಟ ಸೇರಿಸೋದು, ಬಿಡೋದು ಹೈಕಮಾಂಡ್ ಗೆ ಬಿಟ್ಟಿದ್ದು…ಕೇಂದ್ರ ನಾಯಕರ ನಿಧಾ೯ರಕ್ಕೆ ನಾವು ಬದ್ಧ. ನಾವು ಪಕ್ಷದಲ್ಲಿ ಶಿಸ್ತಿನ ಸಿಪಾಯಿಗಳು . ನಾವು ಸೀಟ್ ಗಾಗಿ ಬಡಿದಾಡೋರಲ್ಲ. ಅವರಂತೆ ಸಿದ್ದು ಗುಂಪು, ಡಿಕೆಶಿ ಗುಂಪು..ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಕೇಂದ್ರ ನಾಯಕರ ನಿಧಾ೯ರಕ್ಕೆ ನಾವೆಲ್ಲಾ ಬದ್ಧ. ನೂರಕ್ಕೆ ನೂರು ದೇವರ ಮೇಲಿನ ನಂಬಿಕೆ ಇದೆ. ಯಾವುದೇ ಕಳಂಕ ಇಲ್ಲದೆ ಹೊರಗೆ ಬರುತ್ತೇನೆ. ಸಚಿವ ಸ್ಥಾನ ಕೇಂದ್ರ ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದ್ರು.
ಇದನ್ನೂ ಓದಿ : – SSLC ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ – ರಾಮನಗರದಲ್ಲಿ 8 ಮಂದಿ ಆರೋಪಿಗಳು ಪೊಲೀಸ್ ವಶಕ್ಕೆ