ಬೆಂಗಳೂರು : ಕೊರೋನಾ ಎರಡನೇ ಅಲೆ ಆರಂಭವಾಗಿದ್ದು, ಮೇ 15 ಒಳಗೆ ಬೆಂಗಳೂರಲ್ಲೇ 15 ಸಾವಿರ ಕೇಸ್ ಆಗುವ ಸಾಧ್ಯತೆ ಇದೆ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಸಿ ಎನ್ ಮಂಜುನಾಥ್ ಹೇಳಿದ್ದಾರೆ.
ಈಗಾಗಲೇ ಕೊರೋನಾ ಎರಡನೇ ಅಲೆ ಆರಂಭವಾಗಿದೆ. ಬೆಂಗಳೂರಲ್ಲಿ ಯುವಕರಿಗೆ ಹೆಚ್ಚಾಗಿ ಕೊರೋನಾ ಕಂಡುಬರುತ್ತದೆ. ಐಸ್ ಕ್ರೀಂ, ಚಾಟ್ ಸೆಂಟರ್ ನಲ್ಲಿ ಯುವಕರು ಹೆಚ್ಚಾಗಿ ಕ್ಯೂ ನಲ್ಲಿ ನಿಲ್ಲುತ್ತಿದ್ದಾರೆ ಎಂದರು.
ಜನರ ಸಹಕಾರ ತುಂಬಾ ಮುಖ್ಯವಾಗಿದ್ದು, ಆ್ಯಂಬುಲೆನ್ಸ್ ವ್ಯವಸ್ಥೆ ಮುಖ್ಯ, ಹೊರ ರಾಜ್ಯದಿಂದ ಕೂಲಿ ಕಾರ್ಮಿಕರು ಹೋಗುವುದು ಬೇಡ ನಿಮಗೆ ಎಲ್ಲಾ ವ್ಯವಸ್ಥೆ ಮಾಡಲು ತಯಾರಿದೆ. ಜನ ಭಯಪಡುವುದು ಬೇಡ. ಜಾತ್ರೆ,ಸಮಾರಂಭ, ಮದುವೆ ಮೇಲೆ 250 ಜನ ಹೆಚ್ಚಾಗಬಾರದು ವಾಣಿಜ್ಯ ಚಟುವಟಿಕೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಕೊರೋನಾ ನಿಯಂತ್ರಿಸಲು ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಡಾ ಸಿ ಎನ್ ಮಂಜುನಾಥ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ. ಕೆ ಸುಧಾಕರ್, ಅನ್ಯ ರಾಜ್ಯದಿಂದ ಬರುವವರ ರಿಪೋರ್ಟ್ ನೋಡಿಕೊಂಡೇ ಬಿಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಸಿಎಂ ಮುಂದೆ ಇಟ್ಟು, ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಇದೆಲ್ಲವೂ ವೈಜ್ಞಾನಿಕ ರೀತಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹೆಚ್ಚು ಮೆಡಿಸಿನ್ ಖರೀದಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.