ದೇಶದಲ್ಲಿ ಜಾರಿಗೆ ಬರಲಿರುವ 5ಜಿ ನೆಟ್ ವರ್ಕ್ ಹೊರಸೂಸುವ ತರಂಗಾಂತರದಿಂದ ಮನುಷ್ಯ, ಪ್ರಾಣಿ ಹಾಗೂ ಸೂಕ್ಷ್ಮ ಜೀವಿಗಳ ಮೇಲೆ ದುಷ್ಪರಿಣಾಮ ಬೀರಲಿವೆ ಎಂದು ಬಾಲಿವುಡ್ ನಟಿ ಹಾಗೂ ಪರಿಸರವಾದಿ ಜ್ಯೂಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾಯಮೂರ್ತಿ ಸಿ. ಹರಿಶಂಕರ್ ನೇತೃತ್ವದ ಏಕಸದಸ್ಯ ಪೀಠ ಅರ್ಜಿಯನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಿದ್ದು, ಜೂನ್ 2ರಂದು ವಿಚಾರಣೆ ಆರಂಭಗೊಳ್ಳಲಿದೆ.
ಕೇಂದ್ರ ಟೆಲಿಕಮ್ಯುನಿಕೇಷನ್ ಉದ್ದಿಮೆಗಳು 5ಜಿ ತರಂಗಾಂತರವನ್ನು ದೇಶದಲ್ಲಿ ಚಾಲನೆ ನೀಡಲು ಸಿದ್ಧತೆ ನಡೆಸಿವೆ. ಇದು ಜಾರಿಗೆ ಬಂದರೆ ವರ್ಷದ 365 ದಿನವೂ ತರಂಗಾಂತರ ಅವಾಂತರಗಳನ್ನು ಸೃಷ್ಟಿಸಲಿದೆ. ಇದು ಈ ಹಿಂದಿಗಿಂತ 10ರಿಂದ 100 ಪಟ್ಟು ಅಧಿಕ ಆರ್ ಎಫ್ ತರಂಗಾತರಗಳನ್ನು ಹೊರಸೂಸಲಿವೆ. ಇದರಿಂದ ದೇಶದ ಪ್ರತಿಯೊಬ್ಬ ಮಾನವ, ಪ್ರಾಣಿ, ಪಕ್ಷಿ, ಮರ,ಗಿಡಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜ್ಯೂಹಿ ಚಾವ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.