ಭಾರತ ರಕ್ಷಣಾ ಸಂಶೋಧನಾಲಯ (ಡಿಆರ್ ಡಿಒ) ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ನಿರೋಧಕ ಔಷಧದ ಒಂದು ಪ್ಯಾಕೆಟ್ ಗೆ 990 ರೂ. ನಿಗದಿಪಡಿಸಲಾಗಿದ್ದು, ಸರಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.
ಡಿಆರ್ ಡಿಒ, ಡಾ.ರೆಡ್ಡಿಸ್ ಲ್ಯಾಬ್ ಜಂಟಿಯಾಗಿ ಉತ್ಪಾದಿಸಿದ 2ಡಿಜಿ ಔಷಧ ಸುಮಾರು 10 ಸಾವಿರ ಪ್ಯಾಕೆಟ್ ಮಾರುಕಟ್ಟೆಗೆ ಲಭ್ಯವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ರಾಜ್ಯ ಸರಕಾರಗಳು ನಡೆಸುವ ಸರಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಔಷಧ ಲಭ್ಯವಾಗಲಿದೆ. ಶೀಘ್ರದಲ್ಲೇ ಇದರ ಉತ್ಪಾದನೆ ಹೆಚ್ಚಿಸಲಾಗುವುದು ಎಂದು ರೆಡ್ಡೀಸ್ ಲ್ಯಾಬ್ ಪ್ರಕಟಣೆಯಲ್ಲಿ ತಿಳಿಸಿದೆ.