ಬೆಂಗಳೂರು : ಸಾಂದರ್ಭಿಕವಾಗಿ ಸಿ ಪಿ ಯೋಗೇಶ್ವರ್ ಅವರು ಮಂತ್ರಿ ಆಗಿದ್ದಾರೆ ಅಷ್ಟೇ, ಬಿಜೆಪಿ ಜಿಪಿಎ ಯೋಗೇಶ್ವರ್ ಗೆ ಕೊಟ್ಟಿಲ್ಲ. ಬಿಜೆಪಿ ಅವರಿಗೆ ಬಿ ಫಾರ್ಮ್ ಕೊಟ್ಟಿತ್ತು, ಆದರೆ ಗೆದ್ದಿಲ್ಲ ಎಂದು ಸಚಿವ ಯೋಗೇಶ್ವರ್ ವಿರುದ್ಧ ಶಾಸಕ ಪ್ರೀತಂ ಗೌಡ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತಣಾಡಿದ ಅವರು, ಸರ್ಕಾರ ಬಂದ ಕೂಡಲೇ ಇಡೀ ಪಕ್ಷ ಅವರು ಹೇಳಿದಂತೆ ಕೇಳಿಕೊಂಡು ಬಿದ್ದಿರೋಕೆ ಇದು ಅವರ ಮನೆ ಆಸ್ತಿ ಅಲ್ಲ ಅವರಿಗೆ ಸಮಸ್ಯೆ ಏನಾದರೂ ಹೋಗಿ ಹೇಳಿಕೊಳ್ಳಲಿ. ಸೋತಿರುವವರನ್ನು ತಂದು ಮಂತ್ರಿ ಮಾಡಿದ ಮೇಲೂ ಅವರಿಗೆ ಸಮಸ್ಯೆ ಇದೆ ಅಂತಾದರೆ ಅವರ ಮಾನಸಿಕತೆ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದರು.
ಹಳೆ ಮೈಸೂರು ಭಾಗದ ಬಗ್ಗೆ ಮಾತನಾಡುವಷ್ಟು ದೊಡ್ಡ ನಾಯಕ ಇನ್ನೂ ಯೋಗೇಶ್ವರ್ ಆಗಿಲ್ಲ. ಹಳೆ ಮೈಸೂರು ಭಾಗದಿಂದಲೇ ನಾನು ಬಂದಿದ್ದೇನೆ. ಮೊದಲು ನಿಮ್ಮ ಕ್ಷೇತ್ರ ಗೆಲ್ಲಿರಿ. ಇಂತಹ ಲೂಸ್ ಟಾಕ್ ನಿಂದ ನಮ್ಮಂತಹ ಹಲವಾರು ಶಾಸಕರಿಗೆ ಮುಂದಿನ ಚುನಾವಣೆ ಅಗ್ನಿ ಪರೀಕ್ಷೆ ಆಗುತ್ತದೆ ಎಂದು ಕಿಡಿಕಾರಿದರು.