ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 31,531 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಸಂದರ್ಭದಲ್ಲಿ 403 ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ 6,00,147 ಸಕ್ರಿಯ ಪ್ರಕರಣಗಳು ಇವೆ. ಇವತ್ತು ಒಂದೇ ದಿನ 36,475 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 15,81,457 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 22,03,462 ಕ್ಕೆ ಏರಿಕೆಯಾಗಿದೆ. ಇದುವರೆಗೆ ಕೊರೊನಾ ಸೋಂಕಿನಿಂದ 21,837 ಜನರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು 143 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 8,344 ಜನರಿಗೆ ಹೊಸದಾಗಿ ಸೋಂಕು ತಗಲಿದ್ದು, 3,61,380 ಸಕ್ರಿಯ ಪ್ರಕರಣಗಳಿವೆ. ಇವತ್ತು ಒಂದೇ ದಿನ 13,612 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.