ಜಮ್ಮು ಕಾಶ್ಮೀರದ ಪುಲ್ವಾಮಾ ಮತ್ತು ಸೋಫಿಯಾನಾ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿ ಸೋಫಿಯಾನ ನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರನ್ನು ಹತ್ಯೆಗೈಯ್ಯಲಾಗಿತ್ತು. ಆದರೆ ಇಬ್ಬರು ಜಾನ್ ಮೊಹಲ್ಲಾ ಮಸೀದಿಯೊಳಗೆ ಅಡಗಿದ್ದಾರೆ ಎಂಬ ಸಂಶಯ ಇತ್ತು. ನಂತರ ಅವರನ್ನು ಶುಕ್ರವಾರ ಮುಂಜಾನೆ ಎನ್ ಕೌಂಟರ್ ಮಾಡಲಾಯಿತು.
ಎರಡನೇ ಎನ್ ಕೌಂಟರ್ ಪುಲ್ವಾಮಾದ ಅವಂತಿಪುರದಲ್ಲಿ ಇಬ್ಬರು ಉಗ್ರರನ್ನು ಬಲೆಗೆ ಬೀಳಿಸಿದ ಭದ್ರತಾ ಪಡೆ ಸಿಬ್ಬಂದಿ ಅವರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಯಿತು.