ಮ್ಯಾಟ್ರಿಮೊನಿಯೊದಲ್ಲಿ ಪರಿಚಯವಾದ ವ್ಯಕ್ತಿ ಮದುವೆ ಆಗುವುದಾಗಿ ನಂಬಿಸಿ ಮಹಿಳಾ ಟೆಕ್ಕಿಗೆ 10 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಪರಿಚಯವಾಗಿದ್ದ ಮಧ್ಯಪ್ರದೇಶ ಮೂಲದ ಯುವಕ ಅದಿಕರ್ಶ್ ಶರ್ಮಾ ಎಂಬಾತ ವಂಚಿಸಿ ನಾಪತ್ತೆಯಾಗಿದ್ದಾನೆ.
ಫೆಬ್ರವರಿಯಲ್ಲಿ ಮದುವೆ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ ಯುವತಿ ಅಕೌಂಟ್ ಗೆ ಆದಿಕರ್ಶ್ ಶರ್ಮ ಮದುವೆ ಪ್ರಪೋಸಲ್ ಕಳಿಸಿದ್ದ. ಪರಸ್ಪರ ಪರಿಚಯ ಮಾಡಿಕೊಂಡ ಬಂತರ ಮದುವೆ ನಂತರ ಬೆಂಗಳೂರಿನಲ್ಲಿಯೇ ವಾಸ ಮಾಡುವುದಾಗಿ ನಂಬಿಸಿದ್ದ.
ಬೆಂಗಳೂರಿನಲ್ಲಿ ಬಿಸಿನೆಸ್ ಮಾಡುತ್ತಿದ್ದೀನಿ. ಅಮೌಂಟ್ ಕಡಿಮೆ ಇದೆ ಎಂದು ನಂಬಿಸಿದ್ದ. ಮದುವೆಯಾಗುವ ಹುಡುಗ ಅಂತ ಬ್ಯಾಂಕಿನಿಂದ ಸಾಲ ಮಾಡಿ 10 ಲಕ್ಷ ರೂ.ವನ್ನು ಮಹಿಳೆ ನೀಡಿದ್ದರು.
ಹಣ ಕೈಗೆ ಬರುತ್ತಿದ್ದಂತೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಯುವಕ ನಾಪತ್ತೆಯಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.