ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಬ್ಲಾಕ್ ಫಂಗಸ್ ನಿರ್ವಹಣೆಗೆ ವಿಶೇಷ ಕಾರ್ಯಪಡೆ ರಚಿಸಲಾಗಿದ್ದು, ಬೆಂಗಳೂರು ಸೇರಿದಂತೆ 5 ಕಡೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ತಜ್ಞರ ಜೊತೆ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲ್ಯಾಕ್ ಫಂಗಲ್ ನಿರ್ವಹಣೆ ಕುರಿತು ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. ಕೆಲವು ದಿನಗಳಿಂದ ಬ್ಲಾಕ್ ಫಂಗಲ್ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದಕ್ಕಾಗಿ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದರು.
ಈಗಾಗಲೇ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಈಗಾಗಲೇ ಪ್ರತ್ಯೇಕ ವಾರ್ಡ್ ಮೀಸಲಿರಿಸಿ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಅಲ್ಲದೇ ರಾಜ್ಯದ ಐದು ಭಾಗದಲ್ಲಿ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮೈಸೂರು ಮೆಡಿಕಲ್, ಮಂಗಳೂರು ಮೆಡಿಕಲ್, ಶಿವಮೊಗ್ಗ ಮೆಡಿಕಲ್, ಹುಬ್ಬಳ್ಳಿ ಮೆಡಿಕಲ್, ಉಡುಪಿ ಕೆಎಂಸಿಯಲ್ಲಿ ಚಿಕಿತ್ಸಾ ಕೇಂದ್ರಗಳು ತೆರೆಯಲಾಗುತ್ತಿದೆ ಎಂದು ಅವರು ಹೇಳಿದರು.
ಡಾ.ಭುಜಂಗಶೆಟ್ಟಿ, ಡಾ.ಮಿಂಟೋ ನಿರ್ದೇಶಕಿ ಸುಜಾತ, ಮೈಕ್ರೋ ಬಯಾಲಜಿ ಹೆಚ್ ಓಡಿ ಡಾ ವಿಕಾಸ್ ಸೇರಿದಂತೆ ಇನ್ನಿತರ ವೈದ್ಯರನ್ನು ಒಳಗೊಂಡು ಸಭೆ ಮಾಡಲಾಗಿದೆ. ಮುನ್ನೆಚ್ವರಿಕ ಕ್ರಮಗಳ ಕುರಿತು ತೀರ್ಮಾನಿಸಲಾಗಿದೆ. ಈ ಬಗ್ಗೆ ಸಂಜೆ 5 ಗಂಟೆಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಅವರು ವಿವರಿಸಿದರು.
ಕೋವಿಡ್ ಸಮಾನಂತರ ವಾದ ಖಾಯಿಲೆ ಬ್ಲ್ಯಾಕ್ ಫಂಗಸ್ ಎಂಬ ಅಭಿಪ್ರಾಯ ಸರಿಯಲ್ಲ. ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಡಯಾಬಿಟಿಸ್ ಇದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದವರಲ್ಲಿ ಹೆಚ್ಚಾಗಿ ಇದು ಕಂಡು ಬರುತ್ತಿದೆ ಎಂದು ಸುಧಾಕರ್ ವಿವರಿಸಿದರು.
ಸ್ಟಿರಾಯ್ಡ್ ಯಾರು ತೆಗೆದುಕೊಂಡಿರುತ್ತಾರೆ ಅವರಲ್ಲಿ ಈ ಖಾಯಿಲೆ ಕಾಣಿಕೊಳ್ಳುತ್ತೆ. ಅಂಗಾಂಗಗಳ ಕಸಿ ಮಾಡಿಸಿಕೊಂಡಿರುವವರು ಈ ಖಾಯಿಲೆ ಬರುವ ಸಾಧ್ಯತೆ ಇದೆ. ಸಕ್ಕರೆ ಕಾಯಿಲೆ, ಕ್ಯಾನ್ಸರ್ ಚಿಕಿತ್ಸೆ, ಎಚ್ಐವಿ ಕಾಣಿಸಿಕೊಂಡಿರುವವರಿಗೆ ಕೋವಿಡ್ ಬಂದು ಸ್ಟಿರಾಯ್ಡ್ ತೆಗೆದುಕೊಂಡವರಲ್ಲಿ ಈಖಾಯಿಲೆ ತಗುಲುತ್ತೆ ಎಂದು ಅವರು ಹೇಳಿದರು.
ಈ ಖಾಯಿಲೆ ಮೊದಲು ಮೂಗಿನಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ಕಣ್ಣಿಗೆ, ಮೆದುಳಿಗೆ ತಲುಪುತ್ತದೆ. ಮೊದಲ ಹಂತದಲ್ಲೇ ಬ್ಲಾಕ್ ಫಂಗಲ್ ಕಾಣಿಸಿಕೊಂಡಿದ್ರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಅದನ್ನ ಮೀರಿದರೆ ಚಿಕಿತ್ಸೆ ಕೊಡುವುದ ಕಷ್ಟ. ಹೀಗಾಗಿ ಮೂಗಿನಲ್ಲೇ ಇರುವಾಗ ಖಾಯಿಲೆಯನ್ನ ನಿಭಾಯಿಸುವ ಕೆಲಸ ಮಾಡಬಹುದು. ಈ ಬಗ್ಗೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ ಎಂದು ಸುಧಾಕರ್ ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಈ ಕಾಯಿಲೆ ಕಂಡು ಬಂದರೆ ಸರ್ಕಾರಕ್ಕೆ ಕೂಡಲೆ ಮಾಹಿತಿ ತಲುಪಿಸಬೇಕು. ಬ್ಲ್ಯಾಕ್ ಫಂಗಲ್ ಕಾಣಿಸಿಕೊಂಡು ಚಿಕಿತ್ಸೆಗೆ ದಾಖಲಾದವರ ಬಗ್ಗೆ ಮಾಹಿತಿ ಕೂಡಲೆ ಸರ್ಕಾರಕ್ಕೆ ತಲುಪಿಸಬೇಕು. ಇಲ್ಲವಾದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.