ಗನ್ ಮ್ಯಾನ್ ವೊಬ್ಬ ಏಕಾಏಕಿ ಗುಂಡಿನ ಮಳೆ ಸುರಿಸಿದ್ದರಿಂದ 8 ಮಂದಿ ಮೃತಪಟ್ಟು, ಕನಿಷ್ಠ 6 ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ರಷ್ಯಾದ ಪ್ರೇಮ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಜರುಗಿದೆ.
ಅಪರಿಚಿತ ಗನ್ ಮ್ಯಾನ್ ವಿಶ್ವವಿದ್ಯಾಲಯವನ್ನು ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಘಟನೆಯಿಂದ ಆಘಾತಗೊಂಡ ವಿದ್ಯಾರ್ಥಿಗಳು ಕಿಟಕಿಯಿಂದ ಹೊರಗೆ ಹಾರಿ ಪಾರಾಗುತ್ತಿರುವ ದೃಶ್ಯಗಳು ಕಂಡು ಬಂದಿವೆ.