ಲಿವ್-ಇನ್ ರಿಲೇಶನ್‌ಶಿಪ್ (LIVE IN REALATIONSHIP)ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (SUPREMECOURT) ಮಹತ್ವದ ತೀರ್ಪು ನೀಡಿದ್ದು, ಮದುವೆಯಿಲ್ಲದೆ ಹುಟ್ಟಿದ ಮಕ್ಕಳೂ ತಂದೆಯ ಆಸ್ತಿಗೆ ಹಕ್ಕುದಾರರು ಎಂದು ಹೇಳಿದೆ.
ಒಬ್ಬ ಮಹಿಳೆ ಮತ್ತು ಪುರುಷ ದೀರ್ಘಕಾಲ ಒಟ್ಟಿಗೆ ವಾಸಿಸುತ್ತಿದ್ದರೆ ಅದನ್ನು ಮದುವೆ ಎಂದು ಪರಿಗಣಿಸಲಾಗುವುದು. ಈ ಸಂಬಂಧದಿಂದ ಹುಟ್ಟುವ ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕು ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಂದೆ-ತಾಯಿ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಮಗ ತಂದೆಯ ಆಸ್ತಿಯಲ್ಲಿ ಪಾಲುದಾರ ಎಂದು ಪರಿಗಣಿಸದ ಕೇರಳ ಹೈಕೋರ್ಟ್ (KERALA HIGHCOURT) ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇಬ್ಬರೂ ಮದುವೆಯಾಗದೇ ಇರಬಹುದು, ಆದರೆ ಇಬ್ಬರೂ ಪತಿ-ಪತ್ನಿಯಂತೆ ಬಹಳ ಕಾಲ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ ಡಿಎನ್ ಎ ಪರೀಕ್ಷೆಯಲ್ಲಿ ಮಗು ಇಬ್ಬರದ್ದು ಎಂಬುದು ಸಾಬೀತಾದರೆ ತಂದೆಯ ಆಸ್ತಿಯ ಮೇಲೆ ಮಗುವಿಗೆ ಸಂಪೂರ್ಣ ಹಕ್ಕಿದೆ ಎಂದು ಹೇಳಿದೆ.
ಇದನ್ನೂ ಓದಿ : – ಯೋಗಿ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆ ಕಾನೂನು ಬಾಹಿರ – ಸುಪ್ರೀಂ ಕೋರ್ಟ್ ಗೆ ಅರ್ಜಿ