ಶಾಸಕರ ಕುಟುಂಬದಿಂದ ದಬ್ಬಾಳಿಕೆ ಆರೋಪವನ್ನು ಖಂಡಿಸಿ ಜಮೀನಿನಲ್ಲೇ ನಾಲ್ವರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ನಡೆದಿದೆ.
ಪಾಂಡಪ್ಪ ಲಮಾಣಿ (70) ವರ್ಷ, ಗುರುಚಪ್ಪ ಲಮಾಣಿ (72) ವರ್ಷ, ಗಂಗವ್ವ ಕಬ್ಬೂರು (65) ವರ್ಷ ಮತ್ತು ಹನುಮಂತಪ್ಪ ಬಡಿಗೇರ (41) ವರ್ಷ ಅಸ್ವಸ್ಥಗೊಂಡವರು. ಅಸ್ವಸ್ಥಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಸೇರಿಸಲಾಗಿದೆ. ಹಾವೇರಿ ಜಿಲ್ಲೆಯ ಬಿಜೆಪಿ ಶಾಸಕ ನೆಹರು ಓಲೇಕಾರ್ ಕುಟುಂಬದ ವಿರುದ್ಧ ದಬ್ಬಾಳಿಕೆ ಆರೋಪ ಮಾಡಲಾಗಿದೆ. ಅಕ್ರಮ ಸಕ್ರಮ ಜಮೀನು ಸಾಗುವಳಿ ಮಾಡಿಕೊಂಡು 29 ಕುಟುಂಬಗಳು ಬದುಕುತ್ತಿವೆ. ಇದನ್ನೂ ಓದಿ : – ನನ್ನ ಮೇಲೂ ಈ ಹಿಂದೆ 3 ಬಾರಿ ಆದಾಯ ತೆರಿಗೆ ಅಧಿಕಾರಿಗಳು ರೈಡ್ ಮಾಡಿದ್ದಾರೆ – ಎಂ.ಟಿ.ಬಿ ನಾಗರಾಜ್
ಎಲ್ಲರೂ ತಲಾ 15 ಗುಂಟೆ ಜಮೀನು ಬಿಟ್ಟುಕೊಡುವಂತೆ ಶಾಸಕ ಓಲೇಕಾರ್ ಮತ್ತು ಅವರ ಮಕ್ಕಳು ಹೇಳುತ್ತಿದ್ದಾರೆ. ಜಮೀನು ಬಿಟ್ಟುಕೊಡದಿದ್ದಕ್ಕೆ ಕೃಷಿ ಮಾಡಲು ಗ್ರಾಮಸ್ಥರು ಸಹಕಾರ ನೀಡುತ್ತಿಲ್ಲ. ಹೀಗಾಗಿ ನಾಲ್ವರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : – ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ- ಹಿಂಬದಿಯಿಂದ ಡಿಕೆ ಸುರೇಶ್ ತಳ್ಳಿದ ಪೊಲೀಸ್ ವಿಡಿಯೋ ವೈರಲ್