ಅಲಾಸ್ಕಾ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನವಾದ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ಅಲಾಸ್ಕಾ ಬಳಿಯ ಆಂಕರೇಜ್ ಬಳಿಯ ಚುಗಾಚ್ ಪರ್ವತಗಳನ್ನು ವೀಕ್ಷಿಸಲು ಪ್ರವಾಸಿಗರು ಈ ಹೆಲಿಕಾಪ್ಟರ್ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.
ಈ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಜೆಕ್ ಗಣರಾಜ್ಯದ ಅತಿ ಶ್ರೀಮಂತ ವ್ಯಕ್ತಿ 56 ವರ್ಷದ ಪೀಟರ್ ಕೆಲ್ನೆರ್ ಕೂಡ ಒಬ್ಬರು. 13 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿರುವ ಕೆಲ್ನರ್ ಜೆಕ್ ರಿಪಬ್ಲಿಕ್ನ ಅತಿ ಶ್ರೀಮಂತ ವ್ಯಕ್ತಿ. ಹಿಮನದಿಯಲ್ಲಿ ಹೆಲಿಕಾಪ್ಟರ್ ಪತನವಾಗಿ ಐವರು ಸಾವನ್ನಪ್ಪಿದ್ದರಿಂದ ಈ ಸ್ಥಳದಲ್ಲಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಅಪಘಾತಕ್ಕೆ ಕಾರಣವೇನೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲಾಸ್ಕಾದ ಅಂಕಾರೇಜ್ ಬಳಿಯ ಉತ್ತರ ಚುಗಾಚ್ ಪರ್ವತಗಳಲ್ಲಿನ ದೃಶ್ಯಗಳನ್ನು ವೀಕ್ಷಿಸಲು ಬೇಸಿಗೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪಾದಯಾತ್ರೆ ಮತ್ತು ಬೋಟಿಂಗ್ ಪ್ರವಾಸಗಳಿಗೆ ಇಂದು ಹೆಸರಾದ ತಾಣವಾಗಿದೆ.